ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19: ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದಾಗ ಏನು ಮಾಡಬೇಕು?

ಅಕ್ಷರ ಗಾತ್ರ

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹಬ್ಬುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ ಮುನ್ನಚ್ಚೆರಿಕೆ ವಹಿಸುವುದು ಅತ್ಯಗತ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದೆ. ಮನೆಯಲ್ಲಿ ಒಬ್ಬರು ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದಾಗ ಏನು ಮಾಡಬೇಕು? ಈ ಕುರಿತು ಡಬ್ಲ್ಯು‌ಎಚ್‌ಒ ಸಂಕ್ಷಿಪ್ತ ರೂಪದಲ್ಲಿ ವಿವರಣೆ ನೀಡಿದೆ.

1. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕಿಸಿ

*ಕೋವಿಡ್ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕಿಸಿ. ಅವರಿಗಾಗಿ ಪ್ರತ್ಯೇಕ ಕೋಣೆ ಸಜ್ಜುಗೊಳಿಸಿ. ಮನೆಯ ಇತರೆ ಸದಸ್ಯರ ಸಂಪರ್ಕದಿಂದ ದೂರವಿರಿಸಿ.

*ಕೊಠಡಿಗೆ ಗಾಳಿ ಬೆಳಕಿನ ವ್ಯವಸ್ಥೆ ಮಾಡಿ.

2. ವೈರಸ್ ಸಂಪರ್ಕವನ್ನು ತಡೆಯಿರಿ

* ಸೋಂಕಿತ ವ್ಯಕ್ತಿಯ ಸೇವೆಗಾಗಿ ಹೊರಗಿನವರೊಂದಿಗೆ ಕಡಿಮೆ ಸಂಪರ್ಕ ಹೊಂದಿರುವ ಮನೆಯ ಓರ್ವ ಆರೋಗ್ಯವಂತ ವ್ಯಕ್ತಿಯನ್ನು ಗುರುತಿಸಿ.

*ಸೋಂಕಿತ ವ್ಯಕ್ತಿಯ ಜೊತೆ ಕೊಠಡಿ ಹಂಚಿದ್ದರೆ ಮಾಸ್ಕ್ ಧರಿಸಿ.

*ಸೋಂಕಿತ ವ್ಯಕ್ತಿಗಾಗಿ ಪ್ರತ್ಯೇಕ ಭಕ್ಷ್ಯಗಳು, ಪಾತ್ರೆಗಳು, ಹಾಸಿಗೆ ಹೊದಿಕೆಯನ್ನು ನೀಡಿ. ಸೋಂಕಿತರ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ.

*ಆಗಾಗ್ಗೆ ಸ್ವಚ್ಛಗೊಳಿಸಿ ಸೋಂಕುರಹಿತಗೊಳಿಸಿ.

3. ಸೋಂಕಿತ ವ್ಯಕ್ತಿಯ ಆರೈಕೆ

*ಸೋಂಕಿತ ವ್ಯಕ್ತಿಯ ರೋಗಲಕ್ಷಣಗಳನ್ನು ನಿಯಮಿತವಾಗಿ ವಿಚಾರಿಸಿ.

*ಸೋಂಕಿತ ವ್ಯಕ್ತಿಗೆ ಕಾಯಿಲೆಗಳಿದ್ದರೆ ಹೆಚ್ಚಿನ ಮುತುವರ್ಜಿ ವಹಿಸಿ.

*ಸೋಂಕಿತ ವ್ಯಕ್ತಿಯ ಆಹಾರ ಸೇವನೆ ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿ.

ಅಪಾಯ ಸೂಚನೆ: ಈ ಕೆಳಗಿನ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ:
ಉಸಿರಾಟದ ತೊಂದರೆ, ಎದೆನೋವು, ಮಾನಸಿಕ ಖಿನ್ನತೆ, ಗೊಂದಲ.

ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದಾಗ ಏನು ಮಾಡಬೇಕು?
ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದಾಗ ಏನು ಮಾಡಬೇಕು?

ಇವನ್ನೂ ಓದಿ:









ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT