ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಸ್ಪಂದನ ಅಂಕಣ: ಮಲಬದ್ಧತೆಯೇ? ಗರ್ಭಿಣಿಯರು ಹೀಗೆ ಮಾಡಿ

Published : 5 ಡಿಸೆಂಬರ್ 2025, 23:56 IST
Last Updated : 5 ಡಿಸೆಂಬರ್ 2025, 23:56 IST
ಫಾಲೋ ಮಾಡಿ
Comments
ಪ್ರ

ಐದು ತಿಂಗಳ ಗರ್ಭಿಣಿಯಾಗಿದ್ದು, ಕಚೇರಿಯೊಂದರಲ್ಲಿ ಗುಮಾಸ್ತೆಯಾಗಿದ್ದೇನೆ. ಚೆನ್ನಾಗಿಯೇ ನೀರು ಕುಡಿಯುತ್ತಿದ್ದೇನೆ. ಆದರೂ ಈಗೀಗ ಮಲವಿಸರ್ಜನೆ ಮಾಡುವಾಗ ತುಂಬಾ ನೋವು, ಉರಿ ಉಂಟಾಗುತ್ತದೆ. ಗರ್ಭಿಣಿಯಾಗುವುದಕ್ಕೂ ಮೊದಲು ಮಲಬದ್ಧತೆ ಉಂಟಾದಾಗ ಡುಲ್‌ಕೊಲಾಕ್ಸ್‌ ಮಾತ್ರೆ ಸೇವಿಸುತ್ತಿದ್ದೆ. ಈಗ ಇದಕ್ಕೆ ಪರಿಹಾರವೇನು?

ADVERTISEMENT

ಗರ್ಭಿಣಿಯರಲ್ಲಿ ಶೇ 40ರಷ್ಟು ಮಂದಿಗೆ ಮಲಬದ್ಧತೆ ಸಾಮಾನ್ಯ ಸಮಸ್ಯೆ. ಗರ್ಭ ಧರಿಸಿದ ಹಂತದಲ್ಲಿ ಪ್ರೊಜೆಸ್ಟಿರಾನ್‌ ಹಾರ್ಮೋನ್‌ನ ಮಟ್ಟ ಹೆಚ್ಚಳಗೊಂಡು, ಗರ್ಭವನ್ನು ಕಾಪಾಡಲು ನೆರವಾಗುತ್ತದೆ. ಆದರೆ, ಈ ಹಾರ್ಮೋನ್‌ನಿಂದ ಕರುಳಿನ ಚಲನೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿ, ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಜತೆಗೆ ಗರ್ಭದೊಳಗೆ ಶಿಶು ಬೆಳೆಯುತ್ತಾ ಹೋದಂತೆ ಗರ್ಭಕೋಶ ಹಿಗ್ಗುತ್ತದೆ. ಇದು ಕೂಡ ಕರುಳಿನ ಮೇಲೆ ಒತ್ತಡ ಬೀಳುವಂತೆ ಮಾಡಿ, ಕರುಳಿನ ಚಲನೆಗೆ ಅಡ್ಡಿಯುಂಟುಮಾಡುತ್ತದೆ. ಹೀಗಾದಾಗಲೂ ಮಲಬದ್ಧತೆ ಉಂಟಾಗುತ್ತದೆ.   

ದೈಹಿಕ ಶ್ರಮ ಕಡಿಮೆಯಾದಾಗಲೂ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಕೆಲವೊಮ್ಮೆ ಥೈರಾಯ್ಡ್‌ ಹಾರ್ಮೋನ್‌ ಕಡಿಮೆಯಾದಾಗ, ನಾರಿನಂಶ ಇರುವ ಆಹಾರ ಪದಾರ್ಥಗಳ ಸೇವನೆ ಕಡಿಮೆಯಾದಾಗಲೂ ಮಲ ವಿಸರ್ಜನೆ ಕಷ್ಟವಾಗಬಹುದು.

ಬಯಕೆ ಎಂದು ಕರಿದ, ಹುರಿದ ಆಹಾರ, ಜಂಕ್‌ಫುಡ್‌ ಸೇವಿಸುವುದು ಹೆಚ್ಚಾದಾಗ, ರಕ್ತಹೀನತೆ ಕಡಿಮೆಯಾಗಲು ತೆಗೆದುಕೊಳ್ಳುವ ಕಬ್ಬಿಣಾಂಶದ ಮಾತ್ರೆಗಳಿಂದಲೂ ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆ ಹೆಚ್ಚಾಗಿ, ಕೆಲವೊಮ್ಮೆ ರಕ್ತನಾಳಗಳು ಗುದದ್ವಾರದಿಂದ ಹೊರಮುಖವಾಗಿ ಬಂದು ಮೂಲವ್ಯಾಧಿ ಸಮಸ್ಯೆ ಉಂಟಾಗಬಹುದು. ಮಲದ ಜತೆಗೆ ರಕ್ತಸ್ರಾವ ಉಂಟಾಗಬಹುದು. ಇನ್ನು ಕೆಲವರಲ್ಲಿ ಮಲ ಗಟ್ಟಿಯಾಗಿ, ಅದು ಗುದದ್ವಾರದ ಮೂಲಕ ಹೊರಗೆ ಹೋಗುವಾಗ ಗಾಯ ಉಂಟು ಮಾಡಿ (ಫಿಷರ್‌) ರಕ್ತಸ್ರಾವ ಆಗಬಹುದು. ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆ ಉಂಟಾದರೆ ರಕ್ತಹೀನತೆ ಹೆಚ್ಚಾಗಬಹುದು. ಇಂಥ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮುಂದುವರಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT