ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಕ್ಲಿನಿಕ್‌ ಭೇಟಿಗೂ ಸುರಕ್ಷತೆ ಮುಖ್ಯ

Last Updated 16 ಅಕ್ಟೋಬರ್ 2020, 20:05 IST
ಅಕ್ಷರ ಗಾತ್ರ

ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಜನರು ಕ್ಲಿನಿಕ್‌ಗಳಿಗೆ ಭೇಟಿ ನೀಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯ ಶ್ವಾಸಕೋಶ ತಜ್ಞಡಾ. ಹರ್ಷ ಡಿ.ಎಸ್. ಕೆಲವು ಸಲಹೆಗಳನ್ನು ನೀಡಿದ್ದಾರೆ.

* ಟೆಲಿಮೆಡಿಸಿನ್ ಸೌಲಭ್ಯ ಬಳಸಿಕೊಂಡು ಕ್ಲಿನಿಕ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿದರೆ ಒಳಿತು. ಅನಿವಾರ್ಯವಾದರೆ, ಅಪಾಯಿಂಟ್‌ಮೆಂಟ್ ಪಡೆದೇ ಹೋಗಬೇಕು. ಈಗ ವೈದ್ಯರು ಕೂಡ ಭೇಟಿ ಸಮಯ ನಿಗದಿಪಡಿಸಿಕೊಂಡೇ ರೋಗಿಗಳನ್ನು ನೋಡುತ್ತಾರೆ.

* ನಿರ್ದಿಷ್ಟ ಕ್ಲಿನಿಕ್‌ನಲ್ಲಿ ಯಾವೆಲ್ಲ ನಿಯಮಗಳು ಜಾರಿಯಲ್ಲಿವೆ ಎಂಬುದನ್ನು ತಿಳಿದುಕೊಂಡು, ಎಷ್ಟೊತ್ತಿಗೆ ಅಲ್ಲಿ ತಲುಪಬೇಕು ಎಂಬುದನ್ನು ಖಚಿತಪ‍ಡಿಸಿಕೊಳ್ಳಬೇಕು.

* ಸ್ಯಾನಿಟೈಸರ್ ಬಾಟಲಿ ಜೊತೆಗಿರಲಿ. ರೋಗಿ ಮತ್ತು ಜೊತೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ವೈದ್ಯರ ಕೊಠಡಿಯ ಒಳಹೋದಾಕ್ಷಣ ಮಾಸ್ಕ್ ತೆಗೆಯುವ ಅಭ್ಯಾಸ ಹಲವರಲ್ಲಿದೆ. ಇದು ತಪ್ಪು. ಮನೆಯಿಂದ ಹೊರಡುವಾಗ ಧರಿಸುವ ಮಾಸ್ಕ್ ಅನ್ನು ಪುನಃ ಮನೆ ಸೇರುವ ತನಕ ತೆಗೆಯಬಾರದು.

* ರೋಗಿಯ ಜತೆಗೆ ಅವಶ್ಯವಿದ್ದರೆ ಒಬ್ಬರು ಮಾತ್ರ ಬರಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ದೀರ್ಘಕಾಲೀನ ಕಾಯಿಲೆ ಇರುವವರು ರೋಗಿಗಳ ಜೊತೆಗಾರರಾಗಿ ಬರದಿದ್ದರೆ ಒಳಿತು.

* ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂಬ ಭಯದಿಂದ ವೈದ್ಯರ ಬಳಿ ರೋಗ ಲಕ್ಷಣ ಹೇಳಲು ಹಿಂಜರಿಯಬಾರದು. ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಕೋವಿಡ್ ಗುಣವಾಗುತ್ತದೆ.

* ಕ್ಲಿನಿಕ್‌ಗಳಲ್ಲಿ ಯಾವುದೇ ಸಾಮಗ್ರಿಗಳನ್ನು ಅನಗತ್ಯವಾಗಿ ಸ್ಪರ್ಶಿಸಬಾರದು. ಅಗತ್ಯವಿದ್ದಷ್ಟು ಚರ್ಚಿಸಿ, ಆದಷ್ಟು ಶೀಘ್ರ ವೈದ್ಯರ ಕೊಠಡಿಯಿಂದ ಹೊರಬೇಕು. ಮನೆಗೆ ಹೋದ ಮೇಲೆ ಸ್ನಾನ ಮಾಡಬೇಕು.

* ಕಾಯುವ ಸಂದರ್ಭವಿದ್ದರೆ, ಸ್ವಂತ ವಾಹನದಲ್ಲಿ ಕುಳಿತುಕೊಳ್ಳುವುದು ಒಳಿತು. ಜನದಟ್ಟಣಿ ಇರುವ ಪ್ರದೇಶಕ್ಕಿಂತ ತೆರೆದ ಪ್ರದೇಶದಲ್ಲಿ ನಿಂತು ಕಾಯುವುದು ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT