ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ; ಒಂದಿಷ್ಟು ತಿಳಿಯೋಣ: ಸ್ಕ್ಯಾನಿಂಗ್‌ ವೇಳೆ ಇರಲಿ ಮುಂಜಾಗ್ರತೆ

Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಕಾಲದ ಹೊಸತರಲ್ಲಿ ಎಲ್ಲಿಯಾದರೂ ಮುಟ್ಟಿದರೂ ಸೋಂಕು ಅಂಟ್ಕೊಂಡು ಬಿಡುತ್ತೋ ಅನ್ನೋ ಭಯವಿತ್ತು. ಆಗ ಇದ್ದಂತಹ ಭಯ ಈಗ ತಿಳಿಯಾಗಿದೆ. ಮತ್ತೆಲ್ಲ ಮಾಮೂಲು ಸ್ಥಿತಿಗೆ ಬರುತ್ತಿದೆ. ಅದರಿಂದ ಸ್ಕ್ಯಾನಿಂಗ್‌ ಸೆಂಟರ್‌ಗಳೂ ಹೊರತಾಗಿಲ್ಲ. ಕೊರೊನಾ ಸೋಂಕು ಹರಡುವ ಆತಂಕಕ್ಕೆ ಒಳಗಾಗಿ ಹೆಚ್ಚಿನ ರೋಗಿಗಳು ಅಗತ್ಯವಿದ್ದಾಗಲೂ ಸ್ಕ್ಯಾನಿಂಗ್‌ಗೆ ಒಳಪಡುವುದನ್ನು ಮುಂದೂಡಿದ್ದರು. ಸ್ಕ್ಯಾನಿಂಗ್‌ ಅನಿವಾರ್ಯವೆನಿಸುವ ರೋಗಿಗಳಿಗೆ ಹೆಚ್ಚು ದಿನ ಸ್ಕ್ಯಾನಿಂಗ್‌ ಮುಂದೂಡಲು ಸಾಧ್ಯವಿರದು.

ಸೋಂಕು ಹರಡದಂತೆ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಕುರಿತು ಹುಬ್ಬಳ್ಳಿಯ ಹುಬ್ಳಿ ಸ್ಕ್ಯಾನ್‌ ಸೆಂಟರ್‌ನ ಕನ್ಸಲ್ಟೆಂಟ್‌ ರೇಡಿಯಾಲಜಿಸ್ಟ್‌ ಡಾ.ಚಂದ್ರಕಾಂತ ಎಸ್‌. ಕಾಟ್ವೆ ಒಂದಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು. ಎಸಿ ಬಳಸಲೇಬಾರದು. ಸ್ಕ್ಯಾನಿಂಗ್‌ಗೆ ಒಳಪಡುವ ರೋಗಿಗಳಲ್ಲಿ ಸೋಂಕು ಇದೆಯೇ, ಇಲ್ಲವೆ ಎಂಬುದು ತಕ್ಷಣಕ್ಕೆ ತಿಳಿಯದು. ಆದ್ದರಿಂದ ಸಿ.ಟಿ ಸ್ಕ್ಯಾನ್‌ನಂತಹ ಯಂತ್ರಗಳನ್ನು ಪ್ರತಿ ಸ್ಕ್ಯಾನಿಂಗ್‌ ನಂತರ ಸ್ಯಾನಿಟೈಸ್‌ ಮಾಡುವುದು ಅಗತ್ಯ. ಪ್ರತಿ ಸ್ಕ್ಯಾನ್‌ ನಂತರ ಯಂತ್ರಗಳ ಬೆಡ್‌ ಹಾಗೂ ಅಲ್ಟ್ರಾ ಸೋನೋಗ್ರಾಂ ಸ್ಕ್ಯಾನ್‌ ರೂಮಿನ ಬೆಡ್‌ಗಳ ಹೊದಿಕೆಗಳನ್ನು ಬದಲಾಯಿಸಲೇಬೇಕು.

ಸ್ಕ್ಯಾನಿಂಗ್‌ಗೊಳಪಡುವವರಲ್ಲಿ ಮೇಲ್ನೋಟಕ್ಕೆ ಕೋವಿಡ್‌ ಲಕ್ಷಣಗಳು ಕಂಡುಬಂದಲ್ಲಿ ಮೊದಲು ಸಿ.ಟಿ ಟೆಸ್ಟ್‌ ಮಾಡಲಾಗುವುದು. ಎಂಡೋಸ್ಕೋಪಿ ಮೂಲಕ ಕೊರೊನಾ ಸೋಂಕು ಹರಡುವ ಹೈರಿಸ್ಕ್‌ ಇರುವುದರಿಂದ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಎಂಡೋಸ್ಕೋಪಿಯನ್ನು ಬಂದ್‌ ಇಡುವುದು ಸದ್ಯದ ಮಟ್ಟಿಗೆ ಸೂಕ್ತ ಎನ್ನುತ್ತಾರೆ ಡಾ.ಚಂದ್ರಕಾಂತ ಎಸ್‌. ಕಾಟ್ವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT