ಇತ್ತೀಚೆಗೆ ಚಳಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರಿಂದಾಗಿ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳೂ ಅಧಿಕವಾಗುತ್ತಿವೆ. ಅದರಲ್ಲಿಯೂ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತಿವೆ.

ಗಾಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಪಮಾಣ ಹೆಚ್ಚು. ಈಗಾಗಲೇ ಅಸ್ತಮಾ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಇನ್ನಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ.
.ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು.ನಿದ್ದೆಯಲ್ಲಿ ಬಾಯಿ ಮೂಲಕ ಉಸಿರಾಟ: ಇದು ಸಹಜವೇ?.
ಜನವರಿಯಲ್ಲಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಪೈಕಿ 5 ರಿಂದ 6 ಜನರು ಮೂಗು ಕಟ್ಟಿಕೊಂಡಿರುವುದು, ಒಣ ಕೆಮ್ಮು, ಗಂಟಲು ನೋವು, ಜ್ವರ ಮತ್ತು ಕಿವಿ ನೋವು ಲಕ್ಷಣಗಳನ್ನು ಹೊಂದಿರುತ್ತಾರೆ. ಆರಂಭದಲ್ಲಿ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, 2 ರಿಂದ 3 ವಾರಗಳಲ್ಲಿ ತೀವ್ರ ಅನಾರೋಗ್ಯ ಕಾಡಬಹುದು.

ಜ್ವರ ಅಥವಾ ಕೆಮ್ಮು 72 ಗಂಟೆಗಳೊಳಗೆ ನಿಯಂತ್ರಣಕ್ಕೆ ಬರದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಒಂದು ವೇಳೆ ನಿರ್ಲಕ್ಷಿಸಿದರೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
.ತೀವ್ರ ಚಳಿ: ಉಸಿರಾಟ ಸಮಸ್ಯೆಯಾಗದಂತೆ ಶ್ವಾಸಕೋಶವನ್ನು ಹೀಗೆ ರಕ್ಷಿಸಿಕೊಳ್ಳಿ.
ಪಾಲಿಸಬೇಕಾದ ನಿಯಮಗಳು

ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಆರೋಗ್ಯ ಸಮಸ್ಯೆಯಿರುವವರು, ಹಿರಿಯ ನಾಗರಿಕರು ಮತ್ತು ಮಕ್ಕಳು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಹೆಚ್ಚು ಕಾಳಜಿವಹಿಸಿ

ಬಿಸಿ ನೀರು, ಕಷಾಯವನ್ನು ನಿಯಮಿತವಾಗಿ ಸೇವಿಸುವುದು.

ವೀಪರಿತ ಚಳಿಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.

ಡಾ. ಶ್ರೀಧರ್ ಶ್ರೀನಿವಾಸನ್, ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರು, ಬೆಂಗಳೂರು.
.ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ.ಉಸಿರಾಟ ಸಮಸ್ಯೆಯ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.