ಹಲವರು ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ಸಮಸ್ಯೆ ಎಂದು ಭಾವಿಸುತ್ತಾರೆ. ಇದರಿಂದ ಯಾವುದೇ ಆರೋಗ್ಯ ಹಾನಿಯಿಲ್ಲ ಎಂಬ ನಂಬಿಕೆಯಿದೆ. ಆದರೆ, ಗೊರಕೆ ಕೂಡ ಒಂದು ಗಂಭೀರ ಸಮಸ್ಯೆಯ ಸೂಚಕವಾಗಿದ್ದು, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯನ್ನು ಸೂಚಿಸುತ್ತದೆ.

ಈ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ‘ಸ್ಲೀಪ್ ಅಪ್ನಿಯಾ’ ಎಂದು ಕರೆಯುತ್ತಾರೆ. ಇದು ನಿದ್ರೆಯ ಸಮಯದಲ್ಲಿ ಆಗಾಗ್ಗೆ ನಿಮಗೆ ಅರಿವಿಲ್ಲದಂತೆ ಉಸಿರಾಟವು ಹಲವಾರು ಬಾರಿ ನಿಂತು ಮತ್ತೆ ಪ್ರಾರಂಭವಾಗುವ ಕಾಯಿಲೆಯಾಗಿದೆ. ರೋಗ ನಿರ್ಣಯ ಮಾಡದಿದ್ದರೆ ಮತ್ತು ಇದರ ಬಗ್ಗೆ ಗಮನಹರಿಸದಿದ್ದರೆ, ಅದು ನಿಧಾನವಾಗಿ ನಿಮ್ಮ ದೇಹವನ್ನು ಹದಗೆಡಿಸುತ್ತದೆ ಮತ್ತು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಈಗ ಸಮಸ್ಯೆ ಹೆಚ್ಚಾಗುತ್ತಿದೆ!

ಸ್ಲೀಪ್ ಅಪ್ನಿಯಾ ವಯಸ್ಸಾದವರು ಅಥವಾ ಅಧಿಕ ತೂಕ ಹೊಂದಿರುವವರಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ಭಾವನೆಯಿತ್ತು. ಆದರೆ ಇಂದು ಭಾರತದಲ್ಲಿ ಸುಮಾರು 10 ವಯಸ್ಕರಲ್ಲಿ ಒಬ್ಬರು ನಿದ್ರಾ ಉಸಿರುಗಟ್ಟುವಿಕೆ ರೋಗದಿಂದ (OSA) ಬಳಲುತ್ತಿದ್ದಾರೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ.

ನಮ್ಮ ಜೀವನಶೈಲಿಯಿಂದ ಈ ಸಮಸ್ಯೆ ಇನ್ನಷ್ಟು ಹದಗೆಡುತ್ತಿದೆ. ನಗರದಲ್ಲಿ ವಾಸ, ಒತ್ತಡ, ವಾಯು ಮಾಲಿನ್ಯ, ಅನಿಯಮಿತ ದಿನಚರಿ ಮತ್ತು ದೀರ್ಘಕಾಲದ ಕಚೇರಿಯ ಕ್ಯಾಬಿನ್ಗಳಲ್ಲಿ ಕುಳಿತು ಕೆಲಸ ಮಾಡುವುದು ಈ ಸಮಸ್ಯೆ ಉಲ್ಭಣಗೊಳ್ಳಲು ಪ್ರಮುಖ ಕಾರಣಗಳು. ಇದನ್ನು ಸಾಮಾನ್ಯ ಗೊರಕೆ ಎಂದು ಭಾವಿಸಿ OSAಯ 70-80% ರೋಗನಿರ್ಣಯವನ್ನೇ ಮಾಡದಿರುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಾಮಾನ್ಯವಾಗಿ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಅನಿಯಂತ್ರಿತ ಅಧಿಕ ರಕ್ತದೊತ್ತಡ ಹೊಂದಿರುವ ಸುಮಾರು 10 ಜನರಲ್ಲಿ 6 ಜನರಿಗೆ OSA ಕೂಡ ಇರಬಹುದು. ಮಧುಮೇಹ ಹೊಂದಿರುವ ಅರ್ಧಕ್ಕಿಂತ ಹೆಚ್ಚು ಜನರು OSA ಲಕ್ಷಣಗಳನ್ನು ಹೊಂದಿರಬಹುದು. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ಇಂದು ನಾವು ವಯಸ್ಸಾದವರಲ್ಲಿ ಮಾತ್ರವಲ್ಲದೆ ಕೆಲಸ ಮಾಡುವ ವಯಸ್ಕರು, ಪೋಷಕರು ಮತ್ತು ಮಕ್ಕಳಲ್ಲಿಯೂ ಸಹ ಸ್ಲೀಪ್ ಅಪ್ನಿಯಾ ಪ್ರಕರಣಗಳನ್ನು ನೋಡುತ್ತಿದ್ದೇವೆ.

ನೀವು ಗಮನ ಹರಿಸಬೇಕಾದ ಲಕ್ಷಣಗಳು:

• ಭಾರೀ ಗೊರಕೆ, ವಿಶೇಷವಾಗಿ ಇದು ನಿಯಮಿತವಾಗಿ ಕಾಣಿಸಿಕೊಂಡರೆ

• ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಅಥವಾ ಉಸಿರುಗಟ್ಟಿಸುವ ಶಬ್ದ

• ತಲೆನೋವಿನಿಂದ ಎಚ್ಚರಗೊಳ್ಳುವುದು

• ರಾತ್ರಿ ಪೂರ್ತಿ ನಿದ್ದೆ ಮಾಡಿದರೂ ಹಗಲಿನಲ್ಲಿ ಧಣಿದ ಭಾವನೆ

• ವಿಷಯಗಳನ್ನು ನೆನಪಿಟ್ಟುಕೊಳ್ಳಲು ಅಥವಾ ಗಮನಹರಿಸಲು ಸಾಧ್ಯವಾಗದಿರುವುದು

• ಕಿರಿಕಿರಿ ಅಥವಾ ಮನಸ್ಥಿತಿ ಬದಲಾವಣೆಗಳು

• ಸಂಜೆ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆ

ಭಾರತದಲ್ಲಿನ ಸಾಕಷ್ಟು ಕಾರು ಅಪಘಾತಗಳಿಗೆ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ ಚಾಲಕರು ಕೂಡ ಕಾರಣ. ಅವರಲ್ಲಿ ಬಹುತೇಕರು ರೋಗ ತಪಾಸಣೆ ಮಾಡಿಸಿರುವುದಿಲ್ಲ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ.

ಚಿಕಿತ್ಸೆ ಏಕೆ ಮುಖ್ಯ?

ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಚಿಕಿತ್ಸೆ ನೀಡದಿದ್ದರೆ, ಕಾಲಾನಂತರದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಅವುಗಳೆಂದರೆ:

• ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯುಗೆ ತುತ್ತಾಗುವ ಸಾಧ್ಯತೆ ದ್ವಿಗುಣಗೊಳ್ಳುತ್ತದೆ ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ.

• ಅಧಿಕ ರಕ್ತದೊತ್ತಡ.

• ತೂಕ ಹೆಚ್ಚಾಗುವುದು ಮತ್ತು ಮಧುಮೇಹ.

• ಖಿನ್ನತೆ, ಆತಂಕ ಮತ್ತು ಮರೆವು.

• ಜಾಗರೂಕತೆಯ ಕೊರತೆ ಮತ್ತು ಹಗಲಿನ ಆಯಾಸದಿಂದ ಸಂಭವಿಸುವ ಅಪಘಾತಗಳು.

ರೋಗ ಪತ್ತೆ ಮತ್ತು ಚಿಕಿತ್ಸೆ ಹೇಗೆ?

ಪರೀಕ್ಷೆ ಸರಳವಾಗಿದೆ ಮತ್ತು ನಿಮ್ಮ ಮನೆಯಲ್ಲಿ ಅಥವಾ ಚಿಕಿತ್ಸಾಲಯದಲ್ಲಿ ಮಾಡಬಹುದು. ರೋಗನಿರ್ಣಯದ ನಂತರ, ಉಸಿರುಕಟ್ಟುವಿಕೆಗೆ ಚಿಕಿತ್ಸೆ ನೀಡಲು ಮತ್ತು ನಿರ್ವಹಿಸಲು ಹಲವಾರು ಆಯ್ಕೆಗಳಿವೆ.

• CPAPಗಳು: ಈ ಯಂತ್ರ ನೀವು ನಿದ್ದೆ ಮಾಡುವಾಗ ನಿಮ್ಮ ಉಸಿರಾಟ ಮಾರ್ಗದಲ್ಲಿ ಗಾಳಿಯ ಹರಿವನ್ನು ನೀಡುತ್ತವೆ. ಯಂತ್ರ ಚಿಕ್ಕದಾಗಿದ್ದು, ಈಗ ಕೆಲವು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

• ತೂಕ ಇಳಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು.

• ಮೌತ್ಪೀಸ್ಗಳು: ನಿದ್ರೆಯ ಸಮಯದಲ್ಲಿ ನಿಮ್ಮ ಬಾಯಿಯಲ್ಲಿ ಸೂಕ್ತವಾಗಿ ಕುಳಿತುಕೊಂಡು ಉಸಿರಾಟಕ್ಕೆ ಸಹಾಯ ಮಾಡುತ್ತದೆ.

• ಗಲ ಗ್ರಂಥಿಗಳ (ಟಾನ್ಸಿಲ್) ವಿಸ್ತರಣೆಯಂಥ ಮೂಗು ಅಥವಾ ಗಂಟಲಿನ ಸಮಸ್ಯೆಗಳನ್ನು ಪರಿಹರಿಸುವುದು.

• ಯಾವ ಚಿಕಿತ್ಸೆಗಳು ಉಸಿರುಕಟ್ಟುವಿಕೆಯನ್ನು ಪರಿಹರಿಸದಿದ್ದರೆ ಮಾತ್ರ ಶಸ್ತ್ರಚಿಕಿತ್ಸೆಗೆ ಒಳಪಡುವುದು.

ಚಿಕಿತ್ಸೆ ಯಾವಾಗ ಪಡೆಯಬೇಕು?

ನಿಮ್ಮ ಗೊರಕೆ ಜೋರಾಗಿದ್ದರೆ, ದಣಿದ ಭಾವನೆಯಿಂದ ಎಚ್ಚರಗೊಳ್ಳುತ್ತಿದ್ದರೆ, ನಿಮಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇದ್ದರೆ, ಅದನ್ನು ಪರೀಕ್ಷಿಸುವುದು ಯೋಗ್ಯವಾಗಿದೆ.

ಸ್ಲೀಪ್ ಅಪ್ನಿಯಾ ಚಿಕಿತ್ಸೆಯು ಉತ್ತಮ ಗಮನ, ಸುಧಾರಿತ ಮನಸ್ಥಿತಿ, ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.