ಸೀನುವುದನ್ನು ಮಾನವ ದೇಹದಲ್ಲಿನ ಅತ್ಯಂತ ಸಾಮಾನ್ಯ ಪ್ರಕ್ರಿಯೆಗಳಲ್ಲಿ ಒಂದು. ಮೂಗು ಅಥವಾ ಗಂಟಲಿನಲ್ಲಿ ಕಿರಿಕಿರಿ ಉಂಟದಾಗ ಸೀನು ಬರುವುದು ಸಾಮಾನ್ಯ ಸಂಗತಿ. ಮೂಗಿನ ಮೂಲಕ ಅನಗತ್ಯ ಕಣಗಳನ್ನು ಹೊರ ಹಾಕುವ ದೇಹದ ಒಂದು ವಿಧಾನವಾಗಿದೆ.

ಇದು ವ್ಯಕ್ತಿಗೆ ಯಾವುದೇ ಎಚ್ಚರಿಕೆ ಇಲ್ಲದೆ ಬರುವಂತದ್ದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೀನುವುದನ್ನು ಸ್ಟರ್ನ್ಯುಟೇಶನ್ ಎಂದು ಕರೆಯಲಾಗುತ್ತದೆ. ಇದು ಮೂಗು ಮತ್ತು ಬಾಯಿಯ ಮೂಲಕ ಹಠಾತ್ತನೆ ಬರುತ್ತದೆ.

ಸೀನು ಬರುವುದು ಹೇಗೆ?

ಮೂಗಿನ ಪ್ರಾಥಮಿಕ ಕಾರ್ಯವೆಂದರೆ, ಮೂಗಿನ ಮೂಲಕ ಹಾದು ಹೋಗುವ ಗಾಳಿಯನ್ನು ಸ್ವಚ್ಛಗೊಳಿಸಿ, ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಶೋಧಿಸುವುದಾಗಿದೆ. ಕೆಲವು ಸಂದರ್ಭಗಳಲ್ಲಿ ಧೂಳಿನ ಕಣಗಳು ಮೂಗಿನ ಸೂಕ್ಷ್ಮ ಒಳಪದರವಾದ ಮ್ಯೂಕಸ್ ಪೊರೆಗಳನ್ನು ತಲುಪುತ್ತವೆ. ಆಗ ಮಿದುಳಿನ ಸೀನುವಿಕೆ ಕೇಂದ್ರಕ್ಕೆ ತತ್ಕ್ಷಣ ಎಚ್ಚರಿಕೆಯನ್ನು ಕಳುಹಿಸುತ್ತವೆ. ನಂತರ ಮೆದುಳು ಶಕ್ತಿಶಾಲಿಯಾಗಿ ಪ್ರಚೋದಿಸುತ್ತದೆ. ಇದು ಸೀನಲು ಕಾರಣವಾಗುತ್ತದೆ.

ಸೀನು ಬರುವ ಮುನ್ನ ಎದೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ, ಧ್ವನಿ ಪೆಟ್ಟಿಗೆಯನ್ನು ಮುಚ್ಚುತ್ತದೆ. ಆಗ ಒತ್ತಡ ನಿರ್ಮಾಣವಾಗುತ್ತದೆ. ಅಂತಿಮವಾಗಿ ಗಾಳಿಯ ಸ್ಫೋಟವು ಹೆಚ್ಚಿನ ವೇಗದಲ್ಲಿ ಹೊರಬರುತ್ತದೆ. ಈ ಶಕ್ತಿಯು ಮೂಗಿನ ಮಾರ್ಗಗಳಿಗೆ ಪ್ರವೇಶಿಸಿದ ಕಿರಿಕಿರಿಯುಂಟು ಮಾಡುವ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಆದಾಗ್ಯೂ, ಸೀನುವಿಕೆಗೆ ಕಾರಣವಾಗುವ ಕೆಲವು ಪರಿಸ್ಥಿತಿಗಳಿವೆ. ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳನ್ನು ಗುರುತಿಸುತ್ತದೆ ಮತ್ತು ಸೀನುವಿಕೆಯ ಮೂಲಕ ಹೊರಹಾಕುತ್ತದೆ.

ಶೀತ ಅಥವಾ ಜ್ವರದ ಸಮಯದಲ್ಲಿ ವೈರಸ್ಗಳು ಮೂಗಿನ ಒಳಪದರ ಸೇರುತ್ತವೆ. ಇದು ಮೂಗನ್ನು ಹೆಚ್ಚುವರಿ ಸೂಕ್ಷ್ಮವಾಗಿಸುತ್ತದೆ. ಇದರಿಂದಾಗಿ ಸೀನುವಿಕೆ ಆಗಾಗ ಉಂಟಾಗುತ್ತದೆ. ಬಲವಾದ ಸುಗಂಧ ದ್ರವ್ಯಗಳು, ಹೊಗೆ, ಮಾಲಿನ್ಯ, ಮೆಣಸಿನ ಪುಡಿ, ಅಥವಾ ರಾಸಾಯನಿಕ ಹೊಗೆಗಳು ಸಹ ಮೂಗಿನ ನರಗಳಿಗೆ ಕಿರಿಕಿರಿಯುಂಟು ಮಾಡಬಹುದು. ಇದು ಕೂಡ ಸೀನುವಿಕೆಗೆ ಕಾರಣವಾಗುತ್ತದೆ.

ಒತ್ತಡ ಸಹ ಸೀನುವಿಕೆಯನ್ನು ಪ್ರಚೋದಿಸಬಹುದು. ನೀವು ಒತ್ತಡಕ್ಕೊಳಗಾದಾಗ, ನಿಮ್ಮ ದೇಹವು ಹಿಸ್ಟಮೈನ್ ಸೇರಿದಂತೆ ಇತರೆ ಹಾರ್ಮೋನ್ ಮತ್ತು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಹೆಚ್ಚಿದ ಹಿಸ್ಟಮೈನ್ ಮಟ್ಟಗಳು ಸೀನುವಿಕೆ ಅಥವಾ ಕಣ್ಣಿನ ತುರಿಕೆಗೆ ಕಾರಣವಾಗಬಹುದು.

ಸೀನುವಿಕೆಯು ನಿಮ್ಮ ಬಾಯಿ ಮತ್ತು ಮೂಗಿನಿಂದ 40 ಸಾವಿರ ಸಣ್ಣ ಹನಿಗಳನ್ನು ಹೊರಕ್ಕೆ ಚಿಮ್ಮುತ್ತದೆ. ಇದರಲ್ಲಿ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳು ಸೇರಿರುತ್ತವೆ. ಇತರರಿಗೆ ಈ ಹನಿಗಳು ಸೋಕಿದರೆ, ಅವರಿಗೂ ಸೋಂಕಿನ ಲಕ್ಷಣಗಳು ಬರಬಹುದು. ಸೀನುವಿಕೆಯು ಸಾಮಾನ್ಯವಾಗಿ ಶೀತ, ಜ್ವರ, ಸ್ಟ್ರೆಪ್ ಗಂಟಲು ಮತ್ತು ನಿಮೋನಿಯಾದಂತಹ ಸೋಂಕುಗಳನ್ನು ಹರಡುತ್ತದೆ.

ಸೀನುವಿಕೆಯ ಉಪಯೋಗಗಳು:

ಸೀನುವಿಕೆಯು ಉಸಿರಾಟದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಮೂಗನ್ನು ಸ್ವಚ್ಛಗೊಳಿಸುತ್ತದೆ, ಹಾನಿಕಾರಕ ಕಣಗಳು ಶ್ವಾಸಕೋಶಗಳನ್ನು ತಲುಪದಂತೆ ತಡೆಯುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸಂಕೇತ ನೀಡುತ್ತದೆ. ಸಕ್ರಿಯವಾಗಿ ನಮ್ಮನ್ನು ರಕ್ಷಿಸುತ್ತದೆ. ಸೀನುವಿಕೆಯು ನಮ್ಮ ದೇಹದ ರಕ್ಷಣಾತ್ಮಕ ಪ್ರತಿವರ್ತನವಾಗಿದೆ.

ಜ್ವರ, ಕಣ್ಣುಗಳ ತುರಿಕೆ ಅಥವಾ ದೇಹದ ಇತರ ಭಾಗದ ನೋವುಗಳಂತಹ ಲಕ್ಷಣಗಳು ಅಲರ್ಜಿ ಅಥವಾ ಉಸಿರಾಟದ ಸೋಂಕನ್ನು ಸೂಚಿಸಬಹುದು. ಸೀನುವಿಕೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಯಾವುದೇ ಪುರಾವೆಗಳಿಲ್ಲ.

ನಿರಂತರ ಸೀನುವಿಕೆಯನ್ನು ನಿರ್ವಹಿಸಲು ಕಷ್ಟವಾಗಿರುತ್ತದೆ. ಇದು ಅಪರೂಪದ ಸ್ಥಿತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ತುಂಬಾ ಸೀನುತ್ತಾನೆ. ಈ ಸ್ಥಿತಿಯು ಸಾಮಾನ್ಯ ಚಿಕಿತ್ಸಾ ವಿಧಾನಗಳಿಂದ ಪರಿಹಾರವಾಗುವುದಿಲ್ಲ ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ.

ಲೇಖಕರು: ಡಾ. ಪೂಜಾ ಟಿ, ಹಿರಿಯ ತಜ್ಞ ಶ್ವಾಸಕೋಶಶಾಸ್ತ್ರಜ್ಞ, ಆಸ್ಟರ್ ಆರ್ವಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.