ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿ ಕಬ್ಬಿಣಾಂಶವನ್ನು ಸ್ವಾಭಾವಿಕವಾಗಿ ಹೆಚ್ಚಿಸಲು ಕಬ್ಬಿಣದ ಪಾತ್ರೆ ಸಹಕಾರಿ

Last Updated 20 ಫೆಬ್ರುವರಿ 2021, 10:49 IST
ಅಕ್ಷರ ಗಾತ್ರ

ಆಹಾರದಲ್ಲಿನ ಕಬ್ಬಿಣಾಂಶವು ಪರಿಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಶರೀರದಲ್ಲಿನ ಕಬ್ಬಿಣಾಂಶವು ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕಬ್ಬಿಣಾಂಶವು ಭೂಮಿಯಲ್ಲಿ ಒಂದು ಸಂಪನ್ಮೂಲವಾಗಿ ಹೇರಳವಾಗಿ ದೊರಕಿದರೂ ಕೂಡ ಜೈವಿಕ ಲಭ್ಯತೆಯ ಕುಂದುಕೊರತೆಗಳಿಂದ ಮನುಷ್ಯನು ಅನೇಕ ಕಬ್ಬಿಣಾಂಶದ ಕೊರತೆಯಿಂದಾಗುವ ರೋಗದಿಂದ ಬಳಲುತ್ತಿದ್ದಾನೆ.

ಆಹಾರದಲ್ಲಿನ ಕಬ್ಬಿಣಾಂಶದ ಮಹತ್ವ

-ಕಬ್ಬಿಣಾಂಶವು ದೇಹದ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸಲು ಸಹಾಯಕಾರಿ.

-ಆಮ್ಲಜನಕವನ್ನು ಕೊಂಡ್ಯೊಯಲು ಸಹಾಯ ಮಾಡುವ ಕೆಲವು ಪ್ರೋಟೀನ್ ಗಳ ಸಂಶ್ಲೇಷಣೆಗೆ ಕಬ್ಬಿಣಾಂಶವು ಅವಶ್ಯಕ.

-ಕೆಂಪು ರಕ್ತ ಕಣಗಳು, ಮಾಂಸಖಂಡಗಳು ಹಾಗೂ ಅನೇಕ ಕಿಣ್ವಗಳ ಕಾರ್ಯನಿರ್ವಹಣೆಗೆ ಪೂರಕ.

ಆಹಾರದಲ್ಲಿ ಕಬ್ಬಿಣಾಂಶವನ್ನು ಸ್ವಾಭಾವಿಕವಾಗಿ ಹೆಚ್ಚಿಸುವ ಬಗೆ

-ಸೊಪ್ಪು, ತರಕಾರಿ, ಹಣ್ಣುಗಳು, ಕೆಂಪು ಮಾಂಸ, ಮೀನು, ದವಸಧಾನ್ಯಗಳು, ಮೊಳಕೆ ಕಾಳುಗಳು ಮುಂತಾದವುಗಳಲ್ಲಿ ಕಬ್ಬಿಣಾಂಶವು ಹಚ್ಚಾಗಿರುತ್ತದೆ.

-ಮನೆಯಲ್ಲಿ ಅಡುಗೆ ಮಾಡುವ ಹೆಣ್ಣು ಮಕ್ಕಳು ಕಬ್ಬಿಣದ ಬಾಣಲಿ, ಪಾತ್ರೆ, ಮಗಚುವ ಕೈ ಮುಂತಾದ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಪಾತ್ರೆಯಲ್ಲಿನ ಕಬ್ಬಿಣಾಂಶವು ಸ್ವಾಭಾವಿಕವಾಗಿ ಆಹಾರದಲ್ಲಿ ಬೆರೆಯುತ್ತದೆ. ಈ ಮೂಲಕ ಕಬ್ಬಿಣಾಂಶದ ಕೊರತೆಯಿಂದ ದೂರ ಉಳಿಯಬಹುದಾಗಿದೆ.

-ಪಾತ್ರೆಯ ಗಾತ್ರ ತಯಾರಿಸುವ ಆಹಾರದ ಪ್ರಮಾಣಕ್ಕೆ ತಕ್ಕಂತೆ ಬಳಸುವುದು ಉತ್ತಮ. ದೊಡ್ಡದಾದ ಪಾತ್ರೆಯಲ್ಲಿ ಕಡಿಮೆ ಪ್ರಮಾಣದ ಆಹಾರವನ್ನು ತಯಾರಿಸುವುದರಿಂದ ಪಾತ್ರೆಯು ಬಿಸಿಯಾಗಲು ಹೆಚ್ಚು ಸಮಯ ಬೇಕಾಗುವುದರಿಂದ ಆಹಾರದಲ್ಲಿನ ಸ್ವಾಭಾವಿಕ ಪೋಷಕಾಂಶಗಳು ನಶಿಸಿಹೋಗುತ್ತವೆ.

-ಕಬ್ಬಿಣದ ಪಾತ್ರೆಗಳು, ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅಷ್ಟೇನು ದುಬಾರಿಯೂ ಅಲ್ಲದೆ, ದೀರ್ಘಕಾಲ ಬಳಕೆ ಮಾಡಬಹುದಾಗಿದೆ.

-ಒಮ್ಮೆ ಬಿಸಿಯಾದ ಪಾತ್ರೆಯಲ್ಲಿ ತಾಪಮಾನವು ದೀರ್ಘಕಾಲ ಉಳಿಯುವುದರಿಂದ ಆರೋಗ್ಯಕರ ಆಹಾರ ತಯಾರಿಕೆಗೆ ಪೂರಕ.

-ಕಬ್ಬಿಣದ ಪಾತ್ರೆಗಳು ತುಕ್ಕು ಹಿಡಿಯಬಹುದಾಗಿದ್ದು ಅದನ್ನು ಸುಲಭವಾಗಿ ಸಾಬೂನು ಮತ್ತು ಮೆಟಲ್ ಬ್ರಷ್ ನಿಂದ ಸ್ವಚ್ಛಗೊಳಿಸಬಹುದಾಗಿದೆ.

-ಕಬ್ಬಿಣದ ಪಾತ್ರೆಗಳು, ರಾಸಾಯನಿಕ ಅಂಶಗಳನ್ನು ಒಳಗೊಳ್ಳದೇ ಇರುವುದರಿಂದ ಆರೋಗ್ಯಕ್ಕೆ ಪೂರಕ.

ಆಹಾರದಲ್ಲಿನ ಕುಂದುಕೊರತೆ, ರಕ್ತಸ್ರಾವ, ಅಪೌಷ್ಠಿಕತೆ ಮುಂತಾದ ಕಾರಣಗಳಿಂದ ಕಬ್ಬಿಣಾಂಶದ ಕೊರತೆಯುಂಟಾಗಬಹುದಾಗಿದೆ. ಇದರಿಂದ ರಕ್ತಹೀನತೆ ಮುಂತಾದ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಗರ್ಭಿಣಿಯರಲ್ಲಿ ರಕ್ತ ಹೀನತೆಯಿಂದ ಕಡಿಮೆ ತೂಕದ ಮಗುವಿನ ಜನನ, ತಾಯಿ ಮಗುವಿನ ಮರಣ ಪ್ರಮಾಣವು ಹೆಚ್ಚಾಗಬಹುದಾಗಿದೆ. ಮಕ್ಕಳಲ್ಲಿ ರಕ್ತಹೀನತೆಯಿಂದ ಕಲಿಕಾಶಕ್ತಿ ಕುಂದಬಹುದಾಗಿದೆ. ಆದುದರಿಂದ ರಕ್ತಹೀನತೆ ಒಂದು ಗಂಭೀರ ಸಮಸ್ಯೆಯಾಗಿದ್ದು ಇದಕ್ಕೆ ಮುಖ್ಯ ಕಾರಣ ಕಬ್ಬಿಣಾಂಶ.

ಮನೆಯಲ್ಲಿ ತಾಯಂದಿರು ತಮ್ಮ ದೈನಂದಿನ ಜೀವನದಲ್ಲಿ ತುಸು ಬದಲಾವಣೆಗಳನ್ನು ತರುವುದರಿಂದ ಸಂಸಾರದ ಸದಸ್ಯರು ಆರೋಗ್ಯವಂತರಾಗಿ ಬೆಳೆಯಲು ಸಹಾಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT