ಚಿಕ್ಕಮಕ್ಕಳಲ್ಲಿ ರೋಗ ನಿರೋಧಕಶಕ್ತಿ ಕಡಿಮೆಯಿರುವುದರಿಂದ ಅವರಿಗೆ ಹೆಚ್ಚು ಸೋಂಕುಗಳು ಉಂಟಾಗುತ್ತವೆ. ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಗಂಟಲು ಮತ್ತು ಶ್ವಾಸಕೋಶದ ಸೋಂಕುಗಳು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲವು ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಈ ಮಾದರಿಯ ಸೋಂಕುಗಳನ್ನು ಉಂಟುಮಾಡುತ್ತವೆ. ಮಕ್ಕಳಲ್ಲಿ ಮಾರಣಾಂತಿಕ ಶ್ವಾಸಕೋಶದ ನ್ಯುಮೋನಿಯಾವನ್ನು ಉಂಟುಮಾಡುವ ಕೆಲವೇ ಕೆಲವು ಬ್ಯಾಕ್ಟೀರಿಯಾದ ಸೋಂಕುಗಳನ್ನು ಹತೋಟಿಯಲ್ಲಿಡಲು ಮಕ್ಕಳಿಗೆ ಲಸಿಕೆಗಳನ್ನು ಹಾಕಲಾಗುತ್ತದೆ. ಆದರೆ ಸಾವಿರಾರು ವೈರಾಣುಗಳು ಮಕ್ಕಳಲ್ಲಿ ಉಂಟು ಮಾಡುವ ಶೀತ ಮತ್ತು ಕೆಮ್ಮಿನ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಶಾಲೆಗೆ ಹೋಗುವ ವಯೋಮಾನದ ಮಕ್ಕಳಿಗೆ ಪ್ರತಿ ತಿಂಗಳು ಕೂಡ ಇಂತಹ ಸೋಂಕುಗಳು ಕಾಣಿಸಿಕೊಳ್ಳಬಹುದು. ಶಾಲೆಯಲ್ಲಿ ಒಂದು ಮಗುವಿಗೆ ಶೀತ ಮತ್ತು ಕೆಮ್ಮು ಬಂದರೆ ಅದು ಇತರ ಮಕ್ಕಳಿಗೂ ಹರಡುತ್ತದೆ.

ಮಕ್ಕಳಿಗೆ ಶೀತ ಮತ್ತು ಕೆಮ್ಮು ಬಂದಾಗ ಹೆತ್ತವರಲ್ಲಿ ಆತಂಕ ಉಂಟಾಗುವುದು ಸಹಜ. ಸರಿಯಾದ ಮಾಹಿತಿ ಇಲ್ಲದ ಪೋಷಕರು ವೈದ್ಯರ ಬಳಿಗೆ ಹೋಗದೆ ಕೆಮ್ಮು ಮತ್ತು ಶೀತಕ್ಕೆ ಮೆಡಿಕಲ್ ಅಂಗಡಿಯಿಂದ ಸಿರಪ್ ಅನ್ನು ಖರೀದಿಸಿ ಕುಡಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಇದೇ ತಿಂಗಳು ಮಧ್ಯಪ್ರದೇಶದ ಛಿಂದ್ವಾಢದಲ್ಲಿ ಸುಮಾರು ಹತ್ತೊಂಬತ್ತು ಮಕ್ಕಳು ಕೆಮ್ಮಿನ ಸಿರಪ್ ಕುಡಿದ ಬಳಿಕ ಅಸ್ವಸ್ಥರಾಗಿ ಅಸು ನೀಗಿದ ಘಟನೆ ಜನಮಾನಸದಲ್ಲಿ ಇನ್ನು ಹಸಿರಾಗಿದೆ. ಔಷಧವನ್ನು ಬರೆದುಕೊಟ್ಟ ವೈದ್ಯರು ಮತ್ತು ಕೆಮ್ಮಿನ ಸಿರಪ್ ಅನ್ನು ತಯಾರಿಸಿದ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆಳಕ್ಕ ಇಳಿದು ತನಿಖೆ ನಡೆಸಿದಾಗ ಹಲವಾರು ವಿಚಾರಗಳು ಬೆಳಕಿಗೆ ಬಂದವು.

ಕೆಮ್ಮು ಮತ್ತು ಶೀತಕ್ಕೆ ನೀಡುವ ಔಷಧವನ್ನು ಕೆಮ್ಮಿನ ಸಿರಪ್ ಎಂದು ದ್ರಾವಣರೂಪದಲ್ಲಿ ನೀಡಲಾಗುತ್ತದೆ. ಇದರಲ್ಲಿ ಬಳಸುವ ಔಷಧೀಯ ಗುಣಗಳನ್ನು ಹೊಂದಿರುವ ರಾಸಾಯನಿಕವು ಯಾವುದೇ ದುಷ್ಪರಿಣಾಮವನ್ನು ಮಗುವಿನ ಅಂಗಾಂಗದ ಮೇಲೆ ಉಂಟು ಮಾಡುವುದಿಲ್ಲವೆಂಬುದು ಬಹಳಷ್ಟು ವರ್ಷಗಳಿಂದ ರುಜುವಾತಾಗಿದೆ. ಈ ಔಷಧೀಯ ರಾಸಾಯನಿಕವನ್ನು ದ್ರವರೂಪದಲ್ಲಿ ಕರಗಿಸಿಡಲು ಮತ್ತೊಂದು ರಾಸಾಯನಿಕ ದ್ರವಣವನ್ನು ಬಳಸಲಾಗುತ್ತದೆ. ಅದನ್ನು ‘ಡೈ ಇಥೈಲೀನ್ ಗ್ಲೈಕಾಲ್’ (Diethylene glycol) ಎಂದು ಕರೆಯಲಾಗುತ್ತದೆ. ಡೈ ಇಥೈಲೀನ್ ಗ್ಲೈಕಾಲ್ ಎಂಬ ದ್ರಾವಣವನ್ನು ಔಷಧದಲ್ಲಿ ಬಳಸಿದರೆ ಅದರ ಪರಿಶುದ್ಧತೆಯನ್ನು ದೃಢೀಕರಣ ಮಾಡಬೇಕು. ಔಷಧದ ಉತ್ಪಾದನೆಗೆ ಬಳಸುವ ಡೈ ಇಥೈಲೀನ್ ಗ್ಲೈಕಾಲ್ ದುಬಾರಿ; ಇದು ದೇಹದ ಯಾವುದೇ ಅಂಗಾಂಗದ ಹಾನಿಯನ್ನು ಉಂಟುಮಾಡುವುದಿಲ್ಲ. ಕೆಲವು ಔಷಧ ಉತ್ಪಾದನಾ ಕಂಪೆನಿಗಳು ತಮ್ಮ ಉತ್ಪಾದನಾ ಖರ್ಚನ್ನು ಕಡಿಮೆ ಮಾಡುವ ಕಾರಣದಿಂದ ಕೈಗಾರಿಕೆಗಳಲ್ಲಿ ಬಳಸುವ ಕಡಿಮೆ ಗುಣಮಟ್ಟದ ಡೈ ಇಥೈಲೀನ್ ಗ್ಲೈಕಾಲ್ ಬಳಸುತ್ತಾರೆ. ಅವುಗಳ ಪ್ರಮಾಣವು ಕೆಮ್ಮಿನ ಔಷಧದಲ್ಲಿ ಹೆಚ್ಚಾದಾಗ ಅವು ಕಿಡ್ನಿ ಹಾಗೂ ಮಿದುಳಿನ ವೈಫಲ್ಯವನ್ನು ಉಂಟುಮಾಡುತ್ತದೆ. ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ ಉಂಟಾದ ಮಕ್ಕಳ ಮರಣದ ಪ್ರಕರಣದಲ್ಲಿ ಬಳಸಲಾದ ಕೆಮ್ಮಿನ ಔಷಧದಲ್ಲಿ ಸುಮಾರು ಶೇ 48ಕ್ಕಿಂತಲೂ ಹೆಚ್ಚಿನ ಪ್ರಮಾಣದ ಡೈ ಇಥೈಲೀನ್ ಗ್ಲೈಕಾಲ್ ಅಂಶವು ಕಂಡುಬಂದಿತ್ತು. ಇದು ಅತ್ಯಂತ ಕಳವಳಕಾರಿ ವಿಚಾರ.

ಕೆಮ್ಮಿನ ಸಿರಪ್ನ ಸೇವನೆಯಿಂದ ಮಕ್ಕಳು ಅಸುನೀಗಿರುವ ಘಟನೆಯು ನಮ್ಮಲ್ಲಿ ಮೊದಲ ಬಾರಿಗೆ ನಡೆದಿದ್ದಲ್ಲ. ಈ ಹಿಂದೆ ಇಂಥ ಪ್ರಕರಣಗಳು ರಾಜಸ್ಥಾನದಲ್ಲಿಯೂ ಕಂಡುಬಂದಿದ್ದವು. 2023ರಲ್ಲಿ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ಅನ್ನು ಸೇವಿಸಿದ ಕಾರಣಕ್ಕೆ ಗಾಂಬಿಯಾ ಮತ್ತು ಉಝಬೇಕಿಸ್ಥಾನದಲ್ಲಿ ಹತ್ತಾರು ಮಕ್ಕಳು ಅಸುನೀಗಿದ್ದವು. ಆ ಪ್ರಕರಣದಲ್ಲಿಯೂ ಹಾನಿಕಾರಕ ಡೈ ಇಥೈಲೀನ್ ಗ್ಲೈಕಾಲ್ ಅಂಶವು ಪತ್ತೆಯಾಗಿತ್ತು.

ಮಕ್ಕಳು ವೇಗವಾಗಿ ಬೆಳೆಯುವ ಕಾರಣಕ್ಕೆ ಅವರ ತೂಕವು ಬದಲಾಗುತ್ತಿರುತ್ತದೆ. ನವಜಾತಶಿಶುವಿನ ತೂಕವು ಹುಟ್ಟಿದ ಒಂದೇ ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಕ್ಕಳಿಗೆ ಔಷಧವನ್ನು ನೀಡಬೇಕಾದಲ್ಲಿ ಅವರ ದೇಹದ ತೂಕಕ್ಕೆ ಅನುಗುಣವಾಗಿ ನೀಡಬೇಕಾಗುತ್ತದೆ. ಮಕ್ಕಳ ತಜ್ಞವೈದ್ಯರ ಸಲಹೆಯನ್ನು ಪಡೆಯದೆ ಅಂದಾಜಿನ ಮೇಲೆ ಔಷಧದ ಪ್ರಮಾಣವನ್ನು ನಿರ್ಧರಿಸುವುದು ಅಪಾಯಕಾರಿಯಾಗಬಹುದು.

ಮಾರುಕಟ್ಟೆಯಲ್ಲಿ ತಮ್ಮ ಔಷಧದ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದ ಕಂಪನಿಯ ಔಷಧವನ್ನು ಖರೀದಿಸುವುದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದ ಕ್ರಮ. ಮಾರುಕಟ್ಟೆಯಲ್ಲಿರುವ ವಿವಿಧ ಔಷಧಗಳ ಗುಣಮಟ್ಟದ ಪರೀಕ್ಷೆಗಳನ್ನು ಸಂಬಂಧಪಟ್ಟ ಇಲಾಖೆಯವರು ನಿಯಮಿತವಾಗಿ ನಡೆಸುತ್ತಾ ಬಂದರೆ ದುರ್ಘಟನೆಗಳನ್ನು ತಪ್ಪಿಸಬಹುದಾಗಿದೆ.

ಕೆಮ್ಮುವ ಪ್ರಕ್ರಿಯೆಯೂ ಶ್ವಾಸಕೋಶದೊಳಗೆ ಅನ್ನ, ನೀರು ಮತ್ತು ಇತರ ಕಣಗಳು ಪ್ರವೇಶ ಮಾಡದಂತೆ ತಡೆಯುವ ರಕ್ಷಣಾತ್ಮಕ ಕ್ರಮವಾಗಿದೆ. ಕೆಮ್ಮುವುದನ್ನು ಸಂಪೂರ್ಣವಾಗಿ ಯಾವ ಔಷಧದಿಂದಲೂ ನಿಲ್ಲಿಸಲು ಪ್ರಯತ್ನಿಸಬಾರದು. ಕೆಮ್ಮಿನ ಔಷಧದಲ್ಲಿ ಶ್ವಾಸಕೋಶದೊಳಗಿರುವ ಕಫವನ್ನು ಕರಗಿಸಬಲ್ಲ ಔಷಧ ಮತ್ತು ಮೂಗು ಸೋರುವುದನ್ನು ಕಡಿಮೆ ಮಾಡುವ ಔಷಧೀಯ ಅಂಶಗಳು ಇರುತ್ತದೆ. ಮಕ್ಕಳಲ್ಲಿ ಕೆಮ್ಮು ಮತ್ತು ಶೀತದ ಔಷಧವನ್ನು ಅತ್ಯಂತ ಅಗತ್ಯದ ಸಂದರ್ಭದಲ್ಲಿ, ಅದೂ ತುಂಬ ಎಚ್ಚರಿಕೆಯಿಂದ ಬಳಸಬೇಕು.

ಒಂದು ವರ್ಷದ ಕಡಿಮೆ ವಯಸ್ಸಿನ ಮಕ್ಕಳಿಕೆ ಕೆಮ್ಮು ಮತ್ತು ಶೀತದ ಸಿರಪ್ ಅನ್ನು ನೀಡಿದರೆ ಅವರಿಗೆ ಲಾಭವಾಗುವ ಬಗ್ಗೆ ವೈಜ್ಞಾನಿಕ ವರದಿಗಳಿಲ್ಲ. ಅಲರ್ಜಿ ಮತ್ತು ಇತರ ಕಾರಣಗಳಿಂದ ಬರುವ ಶೀತ ಮತ್ತು ಕೆಮ್ಮಿನ ಕಾಯಿಲೆಗಳಲ್ಲಿ ಕೆಮ್ಮಿನ ಸಿರಪ್ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕೆಮ್ಮು ಮತ್ತು ಶೀತಗಳು ಸೋಂಕಿನ ಸಂಕೇತವಾಗಿದೆಯೆ ಹೊರತು ಅವುಗಳೇ ಕಾಯಿಲೆಗಳಲ್ಲ. ದೇಹದೊಳಗಿನ ಸೋಂಕು ನಿವಾರಣೆಯಾದಾಗ ಶೀತ ಮತ್ತು ಕೆಮ್ಮು ತಾನಾಗಿಯೇ ಕಡಿಮೆಯಾಗುತ್ತದೆ. ತಜ್ಞವೈದ್ಯರ ಸಲಹೆಯಿಲ್ಲದೆ ತಮಗೆ ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.