ಪ್ರಸ್ತುತ ದಿನಗಳಲ್ಲಿ ವಾಟರ್ ಹೀಟರ್ನ ಬಳಕೆ ಅತ್ಯಂತ ಸಾಮಾನ್ಯ. ವಿಶೇಷವಾಗಿ ಚಳಿಗಾಲದಲ್ಲಿ ಜನರು ಬೆಚ್ಚಗಿನ ನೀರಿಗಾಗಿ ಗೀಸರ್ ಬಳಸುತ್ತಾರೆ. ಈ ಪೈಕಿ ಅವಿವಾಹಿತರು ಹೆಚ್ಚಾಗಿ ವಾಟರ್ ಹೀಟರ್ ಬಳಕೆ ಮಾಡುತ್ತಾರೆ. ವಾಟರ್ ಹೀಟರ್ನಿಂದ ಬಿಸಿ ಮಾಡಿದ ನೀರು ಕೂದಲಿಗೆ ಹಾನಿ ಮಾಡುತ್ತದೆ.

ವಾಟರ್ ಹೀಟರ್ ನೀರು ಮತ್ತು ಕೂದಲು

ವಾಟರ್ ಹೀಟರ್ನಿಂದ ಕಾಯಿಸಿದ ನೀರು ಕೂದಲಿಗೆ ಹಾನಿಕಾರಕವಲ್ಲ. ಆದರೆ ಹೇಗೆ ಬಳಸುತ್ತೇವೆ ಎಂಬುದು ಮುಖ್ಯವಾಗಿದೆ. ನೀರಿನ ತಾಪಮಾನ, ನೀರಿನ ಗುಣಮಟ್ಟ ಮತ್ತು ಇದರ ಬಳಕೆ, ಹೀಗೆ ಎಲ್ಲವೂ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ವಾಟರ್ ಹೀಟರ್ನ ನೀರು ಸುರಕ್ಷಿತವಾಗಿದೆ. ಆದರೆ ಅತಿಯಾದ ಬಿಸಿ ನೀರು ಕೂದಲಿನ ನೈಸರ್ಗಿಕ ತೇವಾಂಶವನ್ನು ಕಸಿದುಕೊಳ್ಳಬಹುದು. ಇದು ಕೂದಲನ್ನು ದುರ್ಬಲಗೊಳಿಸುತ್ತದೆ.
.Hair Fall: ಕೂದಲು ಉದುರುವಿಕೆಗೆ ಕಾರಣ, ಪರಿಹಾರ ಕ್ರಮಗಳು ಇಲ್ಲಿವೆ.ಸ್ಮಾರ್ಟ್ ವಾಟರ್ ಹೀಟರ್ ಮಾರುಕಟ್ಟೆಗೆ.
ಅತಿಯಾದ ಬಿಸಿ ನೀರಿನ ಅಪಾಯಗಳು:

ತಲೆ ಒಣಗುವಿಕೆ: ಅತಿ ಬಿಸಿಯಾದ ನೀರು ತಲೆಹೊಟ್ಟೆಯಲ್ಲಿರುವ ನೈಸರ್ಗಿಕ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತದೆ. ನೆತ್ತಿ ಮೇಲಿನ ಕೂದಲು ಒಣಗಿ, ಉದುರುವ ಸಾಧ್ಯತೆ ಹೆಚ್ಚಿರುತ್ತದೆ.

ಕೂದಲಿನ ಪ್ರೋಟೀನ್ಗೆ ಹಾನಿ: ಹೆಚ್ಚು ಬಿಸಿ ನೀರು ಕೂದಲಿನ ಕೆರಾಟಿನ್ ಪ್ರೋಟೀನ್ಗೆ ಹಾನಿ ಮಾಡಬಹುದು. ಇದರಿಂದ ಕೂದಲು ದುರ್ಬಲವಾಗಿ ಸುಲಭವಾಗಿ ಉದುರುತ್ತದೆ.

ಕೂದಲಿನ ಬಣ್ಣ ಮಾಸುವುದು: ನೀವು ಕೂದಲಿಗೆ ಬಣ್ಣ ಹಾಕಿದ್ದರೆ, ಬಿಸಿ ನೀರು ಬಣ್ಣವನ್ನು ವೇಗವಾಗಿ ಅಳಿಸಿ ಹಾಕುತ್ತದೆ.

ನೀರಿನ ಗುಣಮಟ್ಟದ ಪ್ರಭಾವ

ಕೆಲವು ಪ್ರದೇಶಗಳಲ್ಲಿ ನೀರು ಬಲಿಷ್ಠವಾಗುತ್ತದೆ (ಹಾರ್ಡ್ ವಾಟರ್). ವಾಟರ್ ಹೀಟರ್ನಲ್ಲಿ ನೀರನ್ನು ಬಿಸಿ ಮಾಡಿದಾಗ, ಖನಿಜಗಳ ಸಾಂದ್ರತೆ ಹೆಚ್ಚಾಗಬಹುದು. ಗಟ್ಟಿ ನೀರು ಕೂದಲಿನ ಮೇಲಿನ ಪದರವನ್ನು ರೂಪಿಸಿ ಕೂದಲನ್ನು ಮಂದ ಮತ್ತು ಜಿಗುಟಾದಂತೆ ಮಾಡುತ್ತದೆ. ಇದು ಕೂದಲು ಉದುರುವುದಕ್ಕೆ ನೇರ ಕಾರಣವಲ್ಲದಿದ್ದರೂ, ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಸರಿಯಾದ ಬಳಕೆಯ ವಿಧಾನಗಳು

ಸೂಕ್ತ ತಾಪಮಾನ ಆರಿಸಿ: ಬೆಚ್ಚಗಿನ ನೀರು ಬಳಸಿ, ತುಂಬಾ ಬಿಸಿಯಾದ ನೀರನ್ನು ತಪ್ಪಿಸಿ. ನೀರು ಸ್ಪರ್ಶಿಸಲು ಆರಾಮದಾಯಕವಾಗಿರಬೇಕು. ಸುಡುವಂತಿರಬಾರದು. ಈ ಮಟ್ಟದ ನೀರಿನಿಂದ ಸ್ನಾನ ಮಾಡುವುದು ಒಳಿತು.

ತಣ್ಣನೆ ನೀರು ಬಳಕೆ: ಶ್ಯಾಂಪೂ ಹಾಕಿ ತಲೆ ತೊಳೆದ ಬಳಿಕ ತಣ್ಣೀರಿನಿಂದ ಕೊನೆಯ ಬಾರಿ ತೊಳೆಯುವುದು ಉತ್ತಮ. ಇದು ಕೂದಲಿನ ಕ್ಯೂಟಿಕಲ್ಗಳನ್ನು ಮುಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.

ಕಂಡೀಷನರ್ ಬಳಕೆ: ನಿಯಮಿತವಾಗಿ ಉತ್ತಮ ಗುಣಮಟ್ಟದ ಕಂಡೀಷನರ್ ಬಳಸುವುದರಿಂದ ಕೂದಲಿನ ತೇವಾಂಶ ಕಾಪಾಡಿಕೊಳ್ಳಬಹುದು.

ವಾಟರ್ ಹೀಟರ್ನಿಂದ ಕಾಯಿಸಿದ ನೀರು ಅಪಾಯಕಾರಿಯಲ್ಲ. ಆದರೆ, ಸೂಕ್ತ ತಾಪಮಾನದಲ್ಲಿ ಬಳಸುವುದು ಮುಖ್ಯ. ಅತಿಯಾದ ಬಿಸಿ ನೀರು ಮಾತ್ರ ಕೂದಲಿಗೆ ಹಾನಿಕಾರ.

ಲೇಖಕರು: ಡಾ. ಶಿರೀನ್ ಫುರ್ಟಾಡೋ, ಹಿರಿಯ ಸಲಹೆಗಾರ, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗಶಾಸ್ತ್ರ ವಿಭಾಗ, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.