ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಕ್ಕಿದೆ ವೈಜ್ಞಾನಿಕ ಬುನಾದಿ

Last Updated 2 ಆಗಸ್ಟ್ 2021, 9:24 IST
ಅಕ್ಷರ ಗಾತ್ರ

ಆಧುನಿಕ ವೈದ್ಯ ವಿಜ್ಞಾನವು ಪುರಾವೆ ಆಧಾರಿತ ಅಧ್ಯಯನಗಳ (EVIDENCE BASED STUDIES) ಮೇಲೆ ಅವಲಂಬಿತವಾಗಿದೆ. ಇಂತಹದೇ ವೈಜ್ಞಾನಿಕ ಪುರಾವೆಗಳ ಮೇಲೆ ನಿಂತಿರುವಭಾರತದ ಯೋಗ ಸಂಸ್ಕೃತಿಗೆ ಪ್ರಪಂಚವೇ ಮಾರುಹೋಗಿದೆ.

ಆದರೆ, ಭಾರತವು ಈ ಸಂಸ್ಕೃತಿಯನ್ನು ಅಥವಾ ಯೋಗ ಪರಂಪರೆಯನ್ನು ಪ್ರಪಂಚಕ್ಕೆ ಪಸರಿಸಲು ಪುರಾವೆಗಳ ಆಧಾರಿತ ಅಧ್ಯಯನಗಳಅವಶ್ಯಕತೆಯಿದೆ. ಬಾಯಿ ಮಾತಿಗೆ ಯೋಗದಿಂದಾಗುವ ಪ್ರಯೋಜನಗಳನ್ನು ವಿವರಿಸುವ ಬದಲಾಗಿ ಅಧ್ಯಯನಗಳ
ಆಧಾರಿತ ಅಂಕಿ ಅಂಶಗಳೊಂದಿಗೆ ಅದನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನವನ್ನು ಮಾಡಬೇಕಿದೆ.

ಇಲ್ಲಿದೆ ವೈಜ್ಞಾನಿಕ ಪುರಾವೆ

ಯೋಗವನ್ನು ಪ್ರಾಯೋಗಿಕ ವಿಜ್ಞಾನ ಎಂದು ಕರೆಯಬಹುದಾಗಿದೆ. ಶರೀರವನ್ನು ಬೇಕಾದಂತೆ ಬಾಗುವಂತೆ, ಮೂಳೆಗಳ ಸಂಧುಗಳನ್ನು ಮೃದುವಾಗಿ ಚಲಿಸುವಂತೆ ಇಟ್ಟುಕೊಂಡಲ್ಲಿ ಶರೀರದ ಜೀವಕೋಶಗಳ ಅಪಚಯಕ್ರಿಯೆ (CAIABOTIC PROCESS) ಹಾಳಾಗುವುದನ್ನು ತಪ್ಪಿಸಬಹುದಾಗಿದೆ.

ಅಧ್ಯಯನಗಳ ಪ್ರಕಾರ 6 ವಾರಗಳ ನಾಡಿ ಶೋಧನ ಹಾಗೂ ಕಪಾಲಭಾತಿ ಮಾಡಿದ ಜನರಲ್ಲಿ ಶ್ವಾಸಕೋಶದ ಕಾರ್ಯವೈಖರಿಯಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಇದಕ್ಕೆ ಮುಖ್ಯ ಕಾರಣ ಧೀರ್ಘಕಾಲ ಉಸಿರನ್ನು ಹಿಡಿದಿರುವುದರಿಂದ ಶ್ವಾಸಕೋಶದ ಸ್ನಾಯುಗಳ ಬಲವರ್ಧನೆಗೆ ಸಹಾಯಕವಾಗಬಹುದಾಗಿದೆ.

ಸ್ವನಿಯಂತ್ರಿತ ನರಮಂಡಲದ ವ್ಯವಸ್ಥೆಯ ಮೇಲೆ ಯೋಗ ಪ್ರಭಾವ: ನಿಯಮಿತ ಯೋಗಾಭ್ಯಾಸ ಹಾಗೂ ಪ್ರಾಣಾಯಾಮದಿಂದ ಸ್ವನಿಯಂತ್ರಿತ ನರಮಂಡಲದ ವ್ಯವಸ್ಥೆಯಮೇಲೆ ಪ್ರಭಾವ ಬೀರಿ ಹೃದಯದ ಆರೋಗ್ಯವನ್ನು ಹೆಚ್ಚಿಸಿ ರಕ್ತ ಸಂಚಲನೆಯನ್ನು ಸುಸೂತ್ರಗೊಳಿಸಬಹುದಾಗಿದೆ.

ದುಗ್ದರಸಗ್ರಂಥಿಗಳ ಮೇಲೆ ಯೋಗದ ಪ್ರಭಾವ : ಯೋಗದ ಕೆಲವು ಆಸನಗಳು ಭೂಮಿಯ ಗುರುತ್ವಾಕರ್ಷಣಾ ಶಕ್ತಿಯ ವಿರುದ್ಧವಿರುವುದರಿಂದದುಗ್ಧರಸಗ್ರಂಥಿಗಳ ಮೂಲಕ ಶರೀರಕ್ಕೆ ಒಳಹೊಕ್ಕ ಸೋಂಕುಕಾರಕ ವಸ್ತುಗಳನ್ನು ತೆಗೆದು ಶುದ್ಧೀಕರಿಸಲು ಸಹಾಯಕವಾಗಬಹುದಾಗಿದೆ.

ನಿಯಮಿತ ಯೋಗಾಭ್ಯಾಸದಿಂದ ಮೆದುಳು ಕಾರ್ಟಿಸಾಲ್ ಎಂಬ ಹಾರ್ಮೋನ್ ಸ್ರವಿಸುವ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ಆಂತರಿಕ ಆತಂಕವನ್ನು ಕಡಿಮೆ ಮಾಡಬಹುದಾಗಿದ್ದು ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಬಹುದಾಗಿದೆ.

ಯೋಗ ಹಾಗೂ ಧ್ಯಾನದಿಂದ ಮಾನಸಿಕ ಚಿಂತನೆಗಳನ್ನು ಹತೋಟಿಗೆ ತರಬಹುದಾಗಿದ್ದು ಸಕಾರಾತ್ಮಕ ಚಿಂತನೆ, ಕ್ರಿಯಾಶೀಲತೆ, ವಿವೇಚನೆ, ಸಂಯಮದತ್ತ ಕೇಂದ್ರಿಕರಿಸಬಹುದಾಗಿದೆ.

ಇತರೆ ಅನೇಕ ತರಹದ ವ್ಯಾಯಾಮಗಳ ವಿಧಾನಗಳು ಲಭ್ಯವಿದ್ದು, ಅವು ಕೇವಲ ತೂಕ ಇಳಿಸುವಿಕೆ ಅಥವಾ ದೈಹಿಕ ವ್ಯಾಯಾಮಕಷ್ಟೇ ಒತ್ತು ನೀಡಬಹುದಾಗಿರುತ್ತದೆ. ಕೆಲವು ವ್ಯಾಯಾಮಗಳು ಬಹಳ ಆಕ್ರಮಣಕಾರಿ ವಿಧಾನಗಳನ್ನು ಒಳಗೊಂಡಿದ್ದು ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲದ್ದಾಗಿರುತ್ತದೆ. ಯೋಗಾಭ್ಯಾಸ ದೈಹಿಕವಲ್ಲದೆ ಮಾನಸಿಕ ಆರೋಗ್ಯದ ಮೇಲೆ ಪೂರಕ ಪರಿಣಾಮಗಳನ್ನು ಬೀರಬಹುದಾಗಿದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸುತ್ತವೆ.

–––––

ಲೇಖಕರು

ಡಾ|| ಸ್ಮಿತಾ ಜೆ ಡಿ
ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು
ಹಿರಿಯ ದಂತ ವೈದ್ಯರು
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT