ಏಕಾಏಕಿ ಜೋರು ಶಬ್ದ ಕೇಳಿಬಂತು. ಸ್ಥಳದಲ್ಲಿದ್ದ ನನ್ನ ತಲೆಗೆ ಕಬ್ಬಿಣದ ರಾಡು ತಗುಲಿ ಗಾಯವಾಗಿದೆ.
ಸುಬ್ರಹ್ಮಣಿ ಗಾಯಾಳು
ಸ್ಫೋಟಕ ಬಳಕೆ ಆಗಿಲ್ಲ
ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಸ್ಫೋಟದಲ್ಲಿ ಯಾವುದೇ ಕಚ್ಚಾಬಾಂಬ್ ಬಳಕೆಯಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನೆ ನಡೆದ ಅಕ್ಕಪಕ್ಕದ ಮನೆಗಳಲ್ಲಿ ಒಟ್ಟಾರೆ 9 ಗ್ಯಾಸ್ ಸಿಲಿಂಡರ್‌ಗಳು ಸಿಕ್ಕಿವೆ. ಘಟನೆ ಹಿಂದೆ ಸ್ಫೋಟಕದ ಷಡ್ಯಂತ್ರ ಇಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.