ಬೆಂಗಳೂರು: ‘ಹವ್ಯಕ ಸಮುದಾಯವು ಇತ್ತೀಚಿನ ವರ್ಷಗಳಲ್ಲಿ ಅಳಿದು ಹೋಗುತ್ತಿದೆ. ಈ ಸಮುದಾಯದ ಉಳಿವಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕಾದ ಅಗತ್ಯವಿದ್ದು, ಮೂರನೇ ಹಾಗೂ ನಂತರದ ಮಕ್ಕಳನ್ನು ಸಾಕುವ ಜವಾಬ್ದಾರಿ ನಮ್ಮ ಮಠ ಹೊರಲಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಸರ್ಕಾರದ ಮುಂದೆ ನಮ್ಮ ಯಾವುದೇ ಬೇಡಿಕೆಯಿಲ್ಲ. ಬದಲಾಗಿ, ಸಮುದಾಯದ ಮುಂದಿದೆ. ಕಂಚಿ ಪರಮಾಚಾರ್ಯರು ಅನೇಕ ಮಕ್ಕಳನ್ನು ಪಡೆದವರಿಗೆ ‘ವೀರ ಮಾತಾ’ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದ್ದರು. ನಮಗೂ ಅದನ್ನು ಮಾಡುವ ಮನಸ್ಸಿದೆ. ಮೂರು ಮಕ್ಕಳಿದ್ದವರು ಈ ಸನ್ಮಾನಕ್ಕೆ ಅರ್ಹರಾಗುತ್ತಾರೆ’ ಎಂದರು.

‘ಮಕ್ಕಳಿಗೆ ಸಂಬಂಧಿಸಿದಂತೆ ಮಂತ್ರಗಳನ್ನೂ ತಿದ್ದಲಾಗಿದೆ. ‘ಬಹುಪುತ್ರ ಲಾಭಂ’ ಶಬ್ಧವು ‘ಬಹು ಕೀರ್ತಿ ಲಾಭಂ’ ಆಗಿದೆ. ತಂದೆ–ತಾಯಿಗೆ ಮೂರನೇ ಹಾಗೂ ಅದಕ್ಕಿಂತ ಹೆಚ್ಚಿನ ಮಕ್ಕಳು ಬೇಡವಾದರೆ, ಮಕ್ಕಳನ್ನು ಹೆತ್ತು ಮಠಕ್ಕೆ ನೀಡಬಹುದಾಗಿದೆ. ಮಠವೇ ತಾಯಿ–ತಂದೆಯಾಗಿ, ಅವರ ವಿದ್ಯಾಭ್ಯಾಸ ಮತ್ತು ಉದ್ಯೋಗದ ಜವಾಬ್ದಾರಿ ನಿಭಾಯಿಸಲಿದೆ. ನಶಿಸಿ ಹೋಗುತ್ತಿರುವ ಹವ್ಯಕ ತಳಿಯನ್ನು ಉಳಿಸಬೇಕಿದೆ’ ಎಂದು ಹೇಳಿದರು.

‘ಯಾವ ತಳಿ ದೇಶಕ್ಕೆ ಬೇಕಿತ್ತೋ ಆ ತಳಿಯವರು ಮುತುವರ್ಜಿಯಿಂದ ಜನಸಂಖ್ಯಾ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಹವ್ಯಕ ಸಮುದಾಯದವರಲ್ಲಿ ಮದುವೆ, ಮಕ್ಕಳು ಬೇಡ ಎನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮಕ್ಕಳೆಂದರೇ ಖುಷಿ, ದೇವರು ಎಂಬ ಭಾವನೆ, ಈಗ ಹೊರೆ ಎಂಬಂತಾಗಿದೆ. ಎರಡು ಮಕ್ಕಳನ್ನು ಹೊಂದಿದರೂ ಸಮಾಜವನ್ನು ಸರಿತೂಗಿಸಲು ಸಾಧ್ಯವಿಲ್ಲ. ಮಕ್ಕಳು ಸಂಪತ್ತು ಅನ್ನುವುದನ್ನು ಅರಿತುಕೊಳ್ಳಬೇಕು. ಹಿಂದೆ ಅಪರೂಪದ ಭಾರತದ ಗೋ ತಳಿ ಉಳಿಸುವ ಅಭಿಯಾನ ಮಾಡಲಾಗಿತ್ತು. ಈಗ ಅಪರೂಪದ ಹವ್ಯಕ ತಳಿ ಉಳಿಸುವ ಅಭಿಯಾನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಜಾರಿಯಾಗದ ಮೀಸಲಾತಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ‘ಸಂವಿಧಾನವನ್ನು ಗೌರವಿಸುವ ಬಗ್ಗೆ ಅನೇಕ ನಾಯಕರು ಮಾತನಾಡಿ, ಕೈಯಲ್ಲಿ ಕೆಂಪು ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಇದೇ ಸಂವಿಧಾನದಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರವು ಇಲ್ಲಿಯವರಿಗೂ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಈ ಮೀಸಲಾತಿಯನ್ನು ಜಾರಿಮಾಡಿಲ್ಲ. ಬ್ರಾಹ್ಮಣರು ಯಾವುದನ್ನೂ ಕೇಳದಿರುವುದರಿಂದಲೇ ಹೀಗೆ ಆಗುತ್ತಿದೆ’ ಎಂದರು.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಮ್ಮೇಳನದ ಗೌರವಾಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು.

ರಾಜಕೀಯ ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಹವ್ಯಕರು ಛಾಪು ಮೂಡಿಸಿದ್ದಾರೆ. ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲ ಸಮುದಾಯಗಳ ಸಮ್ಮಿಲನ ಅಗತ್ಯ ಸ
ುಬುಧೇಂದ್ರ ತೀರ್ಥ ಸ್ವಾಮೀಜಿ ಮಂತ್ರಾಲಯದ ರಾಘವೇಂದ್ರ ಮಠ

ಹವ್ಯಕರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಡಿಮೆ ಜನಸಂಖ್ಯೆ ಇದ್ದರೂ ಸೇವೆ ತ್ಯಾಗದ ಮನೋಭಾವ ಹೊಂದಿದ್ದಾರೆ. ಈಗಲೂ ಕೃಷಿಯನ್ನು ಬಿಟ್ಟಿಲ್ಲ
ಸೌಮ್ಯನಾಥ ಸ್ವಾಮೀಜಿ ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠ

‘ಅಡಿಕೆ: ಹಿತ ಕಾಯಲು ಕೇಂದ್ರ ಬದ್ಧ’

‘ಹವ್ಯಕರು ಇವತ್ತಿಗೂ ಕೃಷಿ ಅವಲಂಬಿಸಿದ್ದಾರೆ. ಅಡಿಕೆ ಬೆಳೆಗೆ ಸಂಬಂಧಿಸಿ ಸಮುದಾಯದ ಅನೇಕರು ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಇದಕ್ಕೆ ಅನೇಕ ರೀತಿಯ ವರದಿ ಬರುತ್ತಿರುವುದೂ ಕಾರಣ. ಅಡಿಕೆ ಕೇವಲ ತಿನ್ನಲು ಸೀಮಿತವಾಗಿಲ್ಲ. ಅಡಿಕೆ ಇಲ್ಲದೆಯೇ ವಿವಾಹ ನಡೆಯುವುದಿಲ್ಲ ಶ್ರಾದ್ಧವೂ ಆಗುವುದಿಲ್ಲ. ಆದ್ದರಿಂದ ಅಡಿಕೆಗೆ ಸಂಬಂಧಿಸಿ ವಿವಿಧ ರೀತಿಯ ವರದಿಗಳು ಬಂದರೂ ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು. ‘ಐತಿಹಾಸಿಕ ಹಾಗೂ ಪಾರಂಪರಿಕವಾಗಿ ನೋಡಿದರೆ ಬ್ರಾಹ್ಮಣರು ಜಾತಿ ವ್ಯವಸ್ಥೆಗೆ ಪ್ರಾಧಾನ್ಯ ನೀಡಿಲ್ಲ. ಯಾರು ಭಗವಂತನ ಅನ್ವೇಷಣೆಯಲ್ಲಿ ಸತತವಾಗಿ ನಿರತರಾಗಿರುತ್ತಾರೋ ಅವರು ಬ್ರಾಹ್ಮಣರೆಂದು ನಂಬಿದವರು ನಾವು. ರಾಮಾಯಣದ ನಾಯಕ ರಾಮನಾದರೆ ನಿರ್ಮಾಪಕ ವಾಲ್ಮೀಕಿ. ಇವರಿಬ್ಬರೂ ಬ್ರಾಹ್ಮಣರಲ್ಲ. ಖಳನಾಯಕ ರಾವಣ ಬ್ರಾಹ್ಮಣ. ಆದರೆ ನಾವು ರಾವಣನನ್ನು ಖಳನಾಯಕನನ್ನಾಗಿಯೇ ನೋಡಿ ರಾಮನನ್ನು ಪೂಜೆ ಮಾಡುತ್ತೇವೆ. ಕೃಷ್ಣ ವೇದವ್ಯಾಸರು ಬ್ರಾಹ್ಮಣರಲ್ಲದಿದ್ದರೂ ಅವರನ್ನು ಆರಾಧಿಸುತ್ತೇವೆ. ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಬ್ರಾಹ್ಮಣ ಸಮಾಜವು ಎತ್ತಿದ ಕೈ. ದೇಶದ ಹಿತದೃಷ್ಟಿಯಿಂದ ಎಲ್ಲ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.