ಬೆಂಗಳೂರು: ಮನೆಗೆಲಸ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರುವ ನೇಪಾಳಿ ಗ್ಯಾಂಗ್, ನಗರದಲ್ಲಿ ಶ್ರೀಮಂತರ ಮನೆಗಳನ್ನೇ ಗುರಿಯಾಗಿಸಿಕೊಂಡು ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಉದ್ಯೋಗ ಅರಸಿ ಬರುವ ನೇಪಾಳಿ ತಂಡಗಳು, ನಗರದಲ್ಲಿ ಸಂಘಟಿತರಾಗಿ ವ್ಯವಸ್ಥಿತ ರೀತಿಯಲ್ಲಿ ಸಂಚು ರೂಪಿಸಿ ಕಳ್ಳತನ ಮಾಡುತ್ತಿವೆ. ಈ ಸಂಬಂಧ ನಗರದ ವಿವಿಧ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ. ಈ ಗ್ಯಾಂಗ್ ಬಂಧನವೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

‘ನೇಪಾಳದಿಂದ ಬಂದ ಕೆಲವರು ಮಾತ್ರ ಈ ಕೃತ್ಯದಲ್ಲಿ ತೊಡಗಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಮನೆಕೆಲಸದ ನೆಪದಲ್ಲಿ ದಂಪತಿಯೊಂದಿಗೆ ಸೇರಿ ಮನೆಯ ಸಂಪೂರ್ಣ ಮಾಹಿತಿ ತಿಳಿದು, ದರೋಡೆ ಮಾಡುತ್ತಾರೆ. ಭದ್ರತಾ ಸಿಬ್ಬಂದಿ ಕೆಲಸ ಹಾಗೂ ಮನೆಗೆಲಸವನ್ನೇ ಮುಖ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮನೆ, ಫ್ಲ್ಯಾಟ್ಗಳಲ್ಲಿ ಯಾರೂ ಇಲ್ಲದ ಸಮಯ ನೋಡಿ ಯೋಜನೆ ರೂಪಿಸಿ, ಕೃತ್ಯವೆಸಗುತ್ತಿದ್ದಾರೆ. ಈ ಬಗ್ಗೆ ಮನೆ ಮಾಲೀಕರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸರು ಹೇಳಿದರು.

ನೇಪಾಳಿ ಗ್ಯಾಂಗ್ ಆರಂಭದಲ್ಲಿ ಮಾಲೀಕರ ವಿಶ್ವಾಸ ಗಳಿಸಿ, ನಂತರ ಸಮಯ ಸಾಧಿಸಿ ಮನೆಗೆ ಕನ್ನ ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತದೆ. ಆರೋಪಿಗಳ ಪತ್ತೆಗೆ ಪೊಲೀಸರು ಹರಸಾಹಸ ಪಡುವಂತಾಗಿದೆ.

ಮನೆ ಮಾಲೀಕರು ಕಾರ್ಯನಿಮಿತ್ತ ಊರು, ದೇವಸ್ಥಾನ, ಪ್ರವಾಸಕ್ಕೆ ತೆರಳಿದ್ದಾಗ ತಮ್ಮ ತಂಡದ ಸದಸ್ಯರನ್ನು ತಾವು ಕೆಲಸ ಮಾಡುವ ಮನೆಗಳಿಗೆ ಕರೆಸಿಕೊಂಡು ಅವರ ಜತೆ ಸೇರಿ ಕಳ್ಳತನ ಮಾಡುವುದು ಈ ಗ್ಯಾಂಗ್ ಕೆಲಸವಾಗಿದೆ.

ನಗರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ರಾಜ್ ಹಾಗೂ ದೀಪಾ ದಂಪತಿ ಮೇ 27ರಂದು ಸುಮಾರು ₹1.90 ಕೋಟಿ ಮೌಲ್ಯದ 2 ಕೆ.ಜಿ ಚಿನ್ನ, ₹10 ಲಕ್ಷ ನಗದು, ಪಿಸ್ತೂಲ್ನೊಂದಿಗೆ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಮನೆಯ ಮಾಲೀಕರು ಪರಿಚಯಸ್ಥರ ಮೂಲಕ ದಂಪತಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಕಳೆದ ವರ್ಷ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಹಂತ್ ಚಿನ್ನಾಭರಣ ಅಂಗಡಿ ಮಾಲೀಕ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ದಂಪತಿ, ಚಿನ್ನಾಭರಣ ಸೇರಿದಂತೆ ₹15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ನೇಪಾಳಕ್ಕೆ ತೆರಳಿದ್ದ ವಿಜಯನಗರ ಪೊಲೀಸರು 21 ದಿನ ಹುಡುಕಾಟ ನಡೆಸಿ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಆರೋಪಿಗಳನ್ನು ನೇಪಾಳದಿಂದ ನಗರಕ್ಕೆ ಕರೆತರಲು ಈವರೆಗೂ ಪೊಲೀಸರಿಗೆ ಸಾಧ್ಯವಾಗಿಲ್ಲ.

‘ಆರೋಪಿಗಳು ನೇಪಾಳದಲ್ಲಿ ಇರುವುದರಿಂದ ನೇರವಾಗಿ ಬಂಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರನ್ನು ಹಸ್ತಾಂತರ ಮಾಡುವಂತೆ ಇಂಟರ್ಪೋಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವರ್ಷ ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ನಾರಾಯಣಸ್ವಾಮಿ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ಭದ್ರತಾ ಸಿಬ್ಬಂದಿಯೇ ₹1.10 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದರು. ಇದೇ ರೀತಿ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸಂಪಿಗೆ ಚಿತ್ರಮಂದಿರ ಮಾಲೀಕ ನಾಗೇಶ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ದಂಪತಿ ₹38 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಿ: ಸಿಂಗ್

‘ಅಪರಿಚಿತರನ್ನು ಮನೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಮುನ್ನ ಅವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಬೇಕು. ಜತೆಗೆ ಅವರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು. ನೇಪಾಳದ ವ್ಯಕ್ತಿಗಳ ಹಿನ್ನೆಲೆ ವಿಚಾರಿಸದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಮನೆಗೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೇ ಕೃತ್ಯಕ್ಕೆ ಕಾರಣವಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ’ಪ್ರಜಾವಾಣಿ’ಗೆ ತಿಳಿಸಿದರು.

‘ಪರಾರಿಯಾಗಿದ್ದ ಆರೋಪಿಗಳನ್ನು ನೇಪಾಳಿ ಪೊಲೀಸರ ನೆರವಿನೊಂದಿಗೆ ಪತ್ತೆ ಮಾಡಲಾಯಿತು. ಆದರೆ ಅವರನ್ನು ನಗರಕ್ಕೆ ಕರೆತರಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ಕಳ್ಳತನದಲ್ಲಿ ಭಾಗಿಯಾಗುತ್ತಿರುವ ನೇಪಾಳಿ ಗ್ಯಾಂಗ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.