ಮಂಗಳೂರು: ‘ನೂರಕ್ಕೆ ನೂರರಷ್ಟು ಜಿಹಾದಿ ಮನಸ್ಥಿತಿಯ ಮುಸ್ಲಿಮರು ಈ ಕೃತ್ಯ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರ ರಕ್ಷಣೆಗೆ ಬದ್ಧ ಇದ್ದೇವೆ. ಪೊಲೀಸ್ ಇಲಾಖೆಗೂ ಮಾಹಿತಿ ಇದ್ದೂ ನಿರ್ಲಕ್ಷ್ಯ ವಹಿಸಿದ್ದು ಹತ್ಯೆಗೆ ಕಾರಣ. ಈ ಹತ್ಯೆ ಮುಸಲ್ಮಾನರ ಅಟ್ಟಹಾಸಕ್ಕೆ ನಾಂದಿ ಹಾಡಿದೆ. ಹಿಂದೂ ಸಮಾಜ ಇದನ್ನುಸಹಿಸುವುದಿಲ್ಲ. ತಕ್ಕ ಉತ್ತರ ನೀಡಲಿದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಇಲ್ಲಿನ ಎ.ಜೆ.,ಆಸ್ಪತ್ರೆಗೆ ಗುರುವಾರ ರಾತ್ರಿ ಭೇಟಿ ನೀಡಿದ ಅವರು, ‘ಪೊಲೀಸರು ಒಂದು ತಿಂಗಳಿನಿಂದ ಪದೇ ಪದೇ ಸುಹಾಸ್ ಗಾಡಿಯನ್ನು ಏಕೆ ತಪಾಸಣೆ ನಡೆಸಿದ್ದರು. ಆತ್ಮರಕ್ಷಣೆಗಾಗಿ ಮಾರಕಾಸ್ತ್ರ ಇಟ್ಟುಕೊಂಡಿರುತ್ತಿದ್ದರೆ ಆತ ಬದುಕಿ ಉಳಿಯುತ್ತಿದ್ದ. ಪೊಲೀಸರೂ ಆತನಿಗೆ ರಕ್ಷಣೆ ನೀಡಬೇಕಿತ್ತಲ್ಲವೇ. ಪೊಲೀಸ್ ಇಲಾಖೆಗೆ ಜವಾಬ್ದಾರಿ ಇಲ್ಲವೇ. ಗುಪ್ತಚರ ವಿಭಾಗ ಏನು ಮಾಡುತ್ತಿದೆ. ಗಡಿ ಜಿಲ್ಲೆಯಲ್ಲಿ ಹತ್ಯೆ ತಡೆಯಲಾಗದಿದ್ದರೆ ಇವರು ಏನು ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.