ಗೋಣಿಕೊಪ್ಪಲು: ಕೊಡವ ಸಂಸ್ಕೃತಿ ಉಳಿವಿಕೆ ಅಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಗೆ ದಕ್ಷಿಣ ಕೊಡಗಿನಲ್ಲಿ 2ನೇ ದಿನವಾದ ಸೋಮವಾರವೂ ಭರಪೂರ ಬೆಂಬಲ ವ್ಯಕ್ತವಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಅಪಾರ ಜನಸ್ತೋಮ ಪಾದಯಾತ್ರೆಯಲ್ಲಿ ಭಾಗಿಯಾಯಿತು. ‘ಕೊಡವಾಮೆ ಉಳಿಯಲಿ’ ಎಂಬ ಆಶಯದೊಂದಿಗೆ ಸಾವಿರಾರು ಮಂದಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಭಾನುವಾರ ಕುಟ್ಟದಿಂದ ಆರಂಭಗೊಂಡಿದ್ದ ಪಾದಯಾತ್ರೆ ಟಿ.ಶೆಟ್ಟಿಗೇರಿಯಲ್ಲಿ ತಂಗಿತ್ತು. ಸೋಮವಾರ ಬೆಳಿಗ್ಗೆ ಟಿ. ಶೆಟ್ಟಿಗೇರಿಯಿಂದ ಆರಂಭವಾದ ಪಾದಯಾತ್ರೆ ಹುದಿಕೇರಿ ಮೂಲಕ ಪೊನ್ನಂಪೇಟೆ ತಲುಪಿತು. ಮಹಿಳೆಯರು, ಪುರುಷರು ಹಾಗೂ ಯುವಕ ಯುವತಿಯರು ಕೊಡವ ಸಾಂಪ್ರದಾಯಕ ಉಡುಪು ಧರಿಸಿ ಸಾಲಾಗಿ ಶಿಸ್ತುಬದ್ಧ ಮೆರವಣಿಗೆ ನಡೆಸಿದರು.

ತಳಿಯತಕ್ಕಿಬೊಳಚ ಹಿಡಿದ ಮಹಿಳೆಯರು ಮುಂಚೂಣಿಯಲ್ಲಿದ್ದು, ಮೆರವಣಿಗೆಗೆ ಕಳೆ ತುಂಬಿದರು. ಅಂತೆಯೇ ಪುರುಷರು ಕೂಡ ಸಾಥ್ ನೀಡಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.

ಬಿಸಿಲಿನ ತಾಪದಲ್ಲಿ ಹೆಜ್ಜೆ ಹಾಕುವಾಗ ದಣಿವಾರಿಸಿಕೊಳ್ಳಲು ಮಾರ್ಗದುದ್ದಕ್ಕೂ ಹಣ್ಣಿನ ರಸ, ಕುಡಿಯಲು ನೀರು ನೀಡಲಾಗುತ್ತಿತ್ತು. ಮೆರವಣಿಗೆ ಸಾಗುವಾಗ ನೀರು ಒದಗಿಸುವುದಕ್ಕಾಗಿಯೇ ನೇಮಕಗೊಂಡಿದ್ದ ತಂಡ ವಾಹನದೊಂದಿಗೆ ಮೆರವಣಿಗೆಯ ಒಂದು ಬದಿಯಲ್ಲಿ ಸಾಗುತ್ತಿತ್ತು. ಜೊತೆಗೆ, ಆಯಾ ಊರುಗಳು ಬಂದಾಗ ಅಲ್ಲಿನ ಗ್ರಾಮಸ್ಥರು ಕೂಡ ಕೊಡವ ಜನಾಂಗ ತೊಡುವ ಕೆಂಪುವಸ್ತ್ರವನ್ನು ಹಿಡಿದು ಬರಮಾಡಿಕೊಳ್ಳುತ್ತಿದ್ದದು ಕಂಡು ಬಂದಿತು.

ಟಿ.ಶೆಟ್ಟಿಗೇರಿ ಮತ್ತು ತೂಪನಕೊಲ್ಲಿಯಲ್ಲಿ ಅಲ್ಲಿನ ಜನರು ಮೆರವಣಿಗೆಯನ್ನು ತಳಿಯತಕ್ಕಿ ಬೊಳಚದೊಂದಿಗೆ ಬರಮಾಡಿಕೊಂಡರು. ಬಳಿಕ ದಣಿದಿದ್ದವರಿಗೆ ಕಲ್ಲಂಗರಿ ಹಣ್ಣಿನ ರಸನೀಡಿ ಬೀಳ್ಕೊಟ್ಟರು.

ಯಾವುದೇ ಘೋಷಣೆಗಳಿಲ್ಲದೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ನೀರಿನ ವ್ಯವಸ್ಥೆಯೊಂದಿಗೆ ಮೊಬೈಲ್ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮೊಬೈಲ್ ಶೌಚಾಲಯದ ವಾಹನ ಮೆರವಣಿಗೆಯೊಂದಿಗೆ ಸಾಗಿ ಬರುತ್ತಿದೆ.

ಸೋಮವಾರ ಸಂಜೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಾಸ್ತವ್ಯ ಹೂಡಿ ಮಂಗಳವಾರ ಬೆಳಿಗ್ಗೆ ಗೋಣಿಕೊಪ್ಪಲು, ಕೈಕೇರಿ ಮಾರ್ಗವಾಗಿ ಸಾಗಿ ಬಿಟ್ಟಂಗಾಲದಲ್ಲಿ ಬೀಡು ಬಿಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

85 ವರ್ಷದ ಮಹಿಳೆ ಭಾಗಿ

ಬೆಂಬಲ ನೀಡಿದ ಮುಸ್ಲಿಮರು ಪಾದಯಾತ್ರೆಯ ಮಾರ್ಗ ಮಧ್ಯದಲ್ಲಿ ಬೇಗೂರಿನ ಕೊಡವ ಮುಸ್ಲಿಮರು ಪಾದಯಾತ್ರೆಗೆ ಸ್ವಾಗತ ಕೋರಿದರು. ಬಳಿಕ ಅಲ್ಲಿಯೂ ಜ್ಯೂಸ್ ನೀಡಿ ಬೀಳ್ಕೊಟ್ಟರು. ತಾವೂ ಕೂಡ ಸ್ವಲ್ಪ ದೂರ ಸಾಗಿ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.

ಚಿಕ್ಕಮಂಡೂರಿನಲ್ಲಿ 85 ವರ್ಷದ ಬಯವಂಡ ಸರಸ್ವತಿ ಗಾಲಿ ಕುರ್ಚಿಯಲ್ಲಿ ಬಂದು ಪಾದಯಾತ್ರೆಗೆ ಶುಭ ಕೋರಿದ್ದು ವಿಶೇಷ ಎನಿಸಿತು. ಪುತ್ರ ರಬಿ ತಾಯಿಯನ್ನು ಕರೆತಂದು ಮೆರವಣಿಗೆಗೆ ಹುರುಪು ತುಂಬಿದರು. ಶಾಂತಿಯುತವಾಗಿ ಮಧ್ಯಾಹ್ನ 1 ಗಂಟೆ ವೇಳೆಗೆ ಹುದಿಕೇರಿಗೆ ಆಗಮಿಸಿದ ಪಾದಯಾತ್ರೆಯ ಜನತೆ ಅಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ ಊಟ ಮುಗಿಸಿ ಅರ್ಧ ತಾಸು ವಿರಾಮ ಪಡೆದು ಬಳಿಕ ಪೊನ್ನಂಪೇಟೆಯತ್ತ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.