ಬೆಂಗಳೂರು: ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕರಾವಳಿಯ ಹುಡುಗ ಅಸ್ತಿಕ್ ಅವರು ಕನ್ನಡ ಬಿಗ್ಬಾಸ್ನ 10ನೇ ಆವೃತ್ತಿಗೆ ವೈಲ್ಡ್ಕಾರ್ಡ್ ಪ್ರವೇಶ ಮಾಡಿದ್ದಾರೆ.

ಕ್ರಿಕೆಟ್ ನನ್ನ ಫಸ್ಟ್ ಲವ್ ಎನ್ನುತ್ತಲೇ ಬಿಗ್ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮನೆಗೆ ಪ್ರವೇಶ ಮಾಡುವುದಕ್ಕೂ ಮುನ್ನ ಅವರು ಜಿಯೋ ಸಿನಿಮಾಗೆ ನೀಡಿದ ಸಂದರ್ಶನ ಇಲ್ಲಿದೆ.
.BBK 9: ವೈಲ್ಡ್ ಕಾರ್ಡ್ ಎಂಟ್ರಿಗೆ ವೇದಿಕೆ ಸಜ್ಜು... ಯಾರು ಈ ಆವೃತ್ತಿಯ ಸ್ಪರ್ಧಿ?.
ಕರಾವಳಿ ಹುಡುಗ ಬೆಂಗಳೂರಿಗೆ ಬಂದು ಸಿನಿಮಾ ಮಾಡುವುದು ಕಷ್ಟ. ಆದರೆ ಪುನೀತ್ ರಾಜ್ಕುಮಾರ್ ಅವರ ಬೆಂಬಲ ಹಾಗೂ ಜನರ ಆಶೀರ್ವಾದದಿಂದ ಮೂರು ಕನ್ನಡ ಸಿನಿಮಾ ಮಾಡಿದ್ದೇನೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಇದ್ದೇನೆ. ಮೊಥಾಯ್ ಫೈಟರ್ ಕೂಡ ಹೌದು ಎಂದು ತಮ್ಮ ವೃತ್ತಿ ಬಗ್ಗೆ ಶೆಟ್ಟಿ ಹೇಳಿಕೊಂಡಿದ್ದಾರೆ.

ನನ್ನ ಮುಖ್ಯ ಹವ್ಯಾಸ ಕ್ರಿಕೆಟ್. ಕ್ರಿಕೆಟ್ ಆಡುತ್ತಲೇ ಇಲ್ಲಿಗೆ ಬಂದಿದ್ದೇನೆ. ಬಿಗ್ ಬಾಸ್ ಒಳಗೆ ಹೋಗುತ್ತಿರುವುದು ನನ್ನ ಬದುಕಿನ ರೋಮಾಂಚಕ ಕ್ಷಣ ಎಂದು ಹೇಳಿದ್ದಾರೆ.

ಬಿಗ್ಬಾಸ್ಗೆ ಹೋಗುವ ಬಗ್ಗೆ ತಾಯಿಗೆ ತಿಳಿಸಿರಲಿಲ್ಲ. ಇಲ್ಲಿಗೆ ಬರುವ ದಿನ ಬೆಳಿಗ್ಗೆ ಹೋಗಿ ಅವರ ಕಾಲುಮುಟ್ಟಿ ನಮಸ್ಕರಿಸಿ, ಬಿಗ್ಬಾಸ್ಗೆ ಹೋಗುತ್ತಿರುವುದಾಗಿ ತಿಳಿಸಿದೆ. ಅವರು ನಂಬಲಿಲ್ಲ. ನಾನು ಬೆಂಗಳೂರಿಗೆ ಹೊರಡುವ ಹೊತ್ತಿನಲ್ಲಿ ಅಮ್ಮ ತುಂಬ ಖುಷಿಯಾಗಿದ್ದರು. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಗಳಿಗೆ ಎಂದಿದ್ದಾರೆ.
.BBK10: ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ನೀತು– ಹೇಳಿದ್ದೇನು?.
ಕ್ರಿಕೆಟ್ ನನ್ನ ಫಸ್ಟ್ ಲವ್. ಬಿಗ್ಬಾಸ್ ಮನೆಯೊಳಗೆ ನಾನು ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದಿನ ಆವೃತ್ತಿಗಳಲ್ಲಿ ವಿಜಯ ರಾಘವೇಂದ್ರ, ಪ್ರಥಮ್ ಅವರನ್ನು ನಾನು ತುಂಬ ಇಷ್ಟಪಟ್ಟಿದ್ದೇನೆ. ಕಳೆದ ಆವೃತ್ತಿಯ ವಿಜೇತ ರೂಪೇಶ್ ಶೆಟ್ಟಿ ಕೂಡ ನನ್ನ ಸ್ನೇಹಿತ ಎಂದು ನುಡಿದಿದ್ದಾರೆ.

ನಾನು ತುಂಬ ಭಾವಜೀವಿ. ಆದ್ರೆ ಅಷ್ಟೇ ಅಗ್ರೆಸಿವ್ ಕೂಡ ಹೌದು. ನಾನು ಮನೆಯೊಳಗೆ ಹೋಗುತ್ತಿರುವುದೇ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲು. ಮನೆಯೊಳಗೆ ಏನೇ ಕೊಟ್ಟರೂ ನಿಭಾಯಿಸುವೆ. ನಾನೊಂದು ಖಾಲಿ ಹಾಳೆಯಾಗಿ ಒಳಗೆ ಹೋಗುತ್ತಿದ್ದೇನೆ. ಈಗಿನ ಆವೃತ್ತಿಯಲ್ಲಿ ತನಿಷಾ ನನ್ನ ಇಷ್ಟದ ಸ್ಪರ್ಧಿ. ವಿನಯ್ ಹಾಗೂ ಕಾರ್ತಿಕ್ ನನಗೆ ಸ್ಪರ್ಧೆ ನೀಡುತ್ತಾರೆ ಅನಿಸುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.