ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಯ ನೈರ್ಮಲ್ಯ ಕಾರ್ಯಕರ್ತರ ಮೇಲೆ ಹೂವಿನ ದಳಗಳನ್ನು ಸುರಿದಿದ್ದರು. ವಾಹಿನಿಯೊಂದರ ಸುದ್ದಿ ನಿರೂಪಕರು ಈ ಸುದ್ದಿ ನಿರೂಪಿಸುವ ವೇಳೆ, ತಾಜ್ಮಹಲ್ ನಿರ್ಮಿಸಿದ್ದವರ ಕೈಗಳನ್ನು ಮೊಘಲ್ ದೊರೆ ಶಾಜಹಾನ್ ಕತ್ತರಿಸಿದ್ದ. ಮೋದಿ ನೈರ್ಮಲ್ಯ ಕಾರ್ಯಕರ್ತರಿಗೆ ಹೂವಿನ ಅಭಿಷೇಕ ಮಾಡಿದರು ಎಂದಿದ್ದರು. ಇದಾದ ಬಳಿಕ ಕೇಂದ್ರ ಸಚಿವರೂ ಸೇರಿ ಹಲವರು ಶಾಜಹಾನ್, ಕಾರ್ಮಿಕರ ಕೈ ಕತ್ತರಿಸಿದ್ದರ ಕುರಿತು ಹೇಳಿಕೆಗಳನ್ನು ನೀಡಿದ್ದರು ಮತ್ತು ಟ್ವೀಟ್ಗಳನ್ನು ಮಾಡಿದ್ದರು.

ಶಾಜಹಾನ್ ತಾಜ್ಮಹಲ್ ನಿರ್ಮಿಸಿದ್ದವರ ಕೈಗಳನ್ನು ಕತ್ತರಿಸಿದ್ದ ಎಂಬುದು ಬಹಳ ಪ್ರಸಿದ್ಧ ಕಟ್ಟುಕತೆ ಎಂದು ಇತಿಹಾಸಕಾರ ಎಸ್. ಇರ್ಫಾನ್ ಹಬೀಬ್ ಆಲ್ಟ್ ನ್ಯೂಸ್ಗೆ ಹೇಳಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲು ಯಾವ ಪುರಾವೆಯೂ ಇಲ್ಲ. ಯಾವ ವೃತ್ತಿಪರ ಇತಿಹಾಸಕಾರರೂ ಈ ಕುರಿತು ಏನನ್ನೂ ಹೇಳಿಲ್ಲ. ನಾನು ಈ ಕಥೆಯನ್ನು ಸುಮಾರು 1960ರಿಂದಲೂ ಕೇಳುತ್ತಿದ್ದೇನೆ. ಅಂದಿಗೂ ಇಂದಿಗೂ ವ್ಯತ್ಯಾಸವೇನೆಂದರೆ, ಆಗ ಅದು ಶಾಜಹಾನ್ ಕುರಿತಾದ ವ್ಯಂಗ್ಯವಾಗಿತ್ತು ಆದರೆ ಈಗ ಈ ಕಥೆಗೆ ಕೋಮು ಬಣ್ಣ ಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.