ನವದೆಹಲಿ: ಭಾರತವು 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ ಎಂಟನೇ ದೇಶವಾಗಿದ್ದು, 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು ಸ್ಥಾನ ಪಡೆದಿವೆ.

ಹಿಂದಿನ ವರ್ಷ ಈ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿತ್ತು. ಮಂಗಳವಾರ ಸ್ವಿಸ್ನ ಐಕ್ಯುಏರ್ ಸಂಸ್ಥೆ ಬಿಡುಗಡೆ ಮಾಡಿದ ‘ವಿಶ್ವ ವಾಯು ಗುಣಮಟ್ಟ ವರದಿ’ಯಲ್ಲಿ ಮಾಲಿನ್ಯ ಮಾಪಕ ‘ಪಿಎಂ 2.5’ ಮಟ್ಟವು ಸ್ವಲ್ಪ ಕುಸಿದಿದೆ. ಆದಾಗ್ಯೂ ಭಾರತದಲ್ಲಿನ ಗಾಳಿಯು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಅಪಾಯದಲ್ಲಿದೆ. ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಈ ಪಟ್ಟಿ ಸಿದ್ಧಪಡಿಸಿದ್ದಾರೆ.

30,000 ಕ್ಕೂ ಹೆಚ್ಚು ಭೂ-ಆಧಾರಿತ ಮಾನದಂಡಗಳಿಂದ 131 ದೇಶಗಳ ಡೇಟಾವನ್ನು ತೆಗೆದುಕೊಳ್ಳಲಾಗಿದೆ. 7,300 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿರುವ ಪಟ್ಟಿಯ ಅಗ್ರಸ್ಥಾನದಲ್ಲಿ ಭಾರತೀಯ ನಗರಗಳು ಪ್ರಾಬಲ್ಯ ಹೊಂದಿವೆ. ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಹೊಟಾನ್ ಮೊದಲ ಎರಡು ಅತ್ಯಂತ ಕಲುಷಿತ ನಗರಗಳಾಗಿದ್ದು, ರಾಜಸ್ಥಾನದ ಭಿವಾಡಿ ಮತ್ತು ದೆಹಲಿ ನಂತರದ ಸ್ಥಾನದಲ್ಲಿದೆ. ದೆಹಲಿಯ ‘ಪಿಎಂ 2.5’ ಮಟ್ಟವು ಸುರಕ್ಷಿತ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚು ಅಪಾಯದಲ್ಲಿದೆ.

ಅಗ್ರ 10 ಕಲುಷಿತ ನಗರಗಳಲ್ಲಿ ಭಾರತದ 6 ನಗರಗಳಿವೆ. ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯನ್ನು 'ಗ್ರೇಟ್' ದೆಹಲಿ ಮತ್ತು ನವದೆಹಲಿಯ ಎಂದು ವರ್ಗೀಕರಿಸಲಾಗಿದ್ದು, ಎರಡು ನಗರಗಳೂ ಕಲುಷಿತ ನಗರವೆಂಬ ಅಪಖ್ಯಾತಿಗೆ ಪಾತ್ರವಾಗಿವೆ.

ದೆಹಲಿಯ ಪಕ್ಕದ ಪಟ್ಟಣಗಳಾದ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್ಗಳು ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡಿವೆ. ಆದರೆ ಈ ನಗರಗಳಲ್ಲಿನ ಮಾಲಿನ್ಯದ ನಿಜವಾದ ಮಟ್ಟವು ಭಾರತೀಯ ಸರಾಸರಿಗಿಂತ ತುಂಬಾ ಹೆಚ್ಚಾಗಿದೆ. ಜಾಗತಿಕವಾಗಿ ಬೆಂಗಳೂರು 440ನೇ ಸ್ಥಾನದಲ್ಲಿದ್ದು, ಇಲ್ಲಿನ ವಾಯುಗುಣಮಟ್ಟ ಉತ್ತಮವಾಗಿದೆ.

ಓದಿ... ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ರೈಲ್ವೆ ಟಿಟಿಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.