ಕೇಂದ್ರ ಸರ್ಕಾರವು ‘ವಲಸೆ ಮತ್ತು ವಿದೇಶಿಯರ ಮಸೂದೆ, 2025’ ಮಸೂದೆ ಅನ್ನು ಸಿದ್ಧಪಡಿಸಿದೆ. 1920ರ ‘ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ’, 1939ರ ‘ವಿದೇಶಿಯರ ನೋಂದಣಿ ಕಾಯ್ದೆ’, 1946ರ ‘ವಿದೇಶಿಯರ ಕಾಯ್ದೆ’ ಮತ್ತು 2000ರ ‘ವಲಸೆ (ಸಂಚಾರ ಸಾಧನ) ಕಾಯ್ದೆ’ಗಳ ಬದಲಿಗೆ ಈ ಮಸೂದೆಯನ್ನು ಕೇಂದ್ರ ರೂಪಿಸಿದೆ. ‘ನಾಲ್ಕೂ ಕಾಯ್ದೆಗಳಲ್ಲಿ ಇರುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ. ನಿಯಮಗಳನ್ನು ಸರಳಗೊಳಿಸಲಾಗಿದೆ’ ಎಂದು ಸರ್ಕಾರ ಹೇಳಿದೆ. ಕೆಲವು ನಿಯಮಗಳಲ್ಲಿ ‘ನಿರ್ದಿಷ್ಟ ವರ್ಗದ ವಿದೇಶಿಯರು’ ಎಂಬ ಹೊಸ ವ್ಯಾಖ್ಯಾನವನ್ನು ಮಸೂದೆಯಲ್ಲಿ ಮಾಡಲಾಗಿದೆ. ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.