ಯುದ್ಧ ವಿಮಾನ ಕಳೆದುಕೊಂಡಿದ್ದಕ್ಕಿಂತ ಅವುಗಳನ್ನು ಏಕೆ ಕಳೆದು ಕೊಂಡೆವು ಎಂಬುದು ಮುಖ್ಯ. ಕಾರ್ಯತಂತ್ರದಲ್ಲಿ ಆದ ಲೋಪ ಸರಿಪಡಿಸಿಕೊಂಡು ತಿರುಗೇಟು ನೀಡಿದೆವು
ಅನಿಲ್ ಚೌಹಾಣ್, ಸಿಡಿಎಸ್
ಸೂಚ್ಯವಾಗಿ ಹೇಳಿದ್ದ ಭಾರ್ತಿ
ಹಾನಿಯು ಸಮರದ ಭಾಗ ಎಂದು ಭಾರತೀಯ ವಾಯುಪಡೆಯ ವೈಮಾನಿಕ ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಹೇಳಿದ್ದರು. ಆದರೆ ಭಾರತೀಯ ವಾಯುಪಡೆಯ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ ಎಂಬುದನ್ನು ಮೇ 11ರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.