‘ಪುಷ್ಪಕ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯೊಂದರ ಆಕ್ಸೆಲ್ ತೀವ್ರವಾಗಿ ಬಿಸಿಯಾಗಿತ್ತು. ಆದ್ದರಿಂದ ಆಕ್ಸೆಲ್‌ನಲ್ಲಿ ಕಿಡಿ ಹೊತ್ತಿಕೊಂಡಿತು. ಇದರಿಂದ ಹೊಗೆ ಎದ್ದಿತು. ಹೊಗೆ ನೋಡುತ್ತಿದ್ದಂತೆಯೇ ಜನರು ಭೀತರಾದರು. ಯಾರೋ ಒಬ್ಬರು ರೈಲಿನ ಚೈನ್ ಎಳೆದರು. ಕೆಲವರು ರೈಲಿನಿಂದ ಹಾರಿ ಪಕ್ಕದ ಹಳಿಯ ಮೇಲಿದ್ದರು. ಇದೇ ವೇಳೆ ಪುಷ್ಪಕ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಹಲವರು ಮೃತಪಟ್ಟರು’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ 8 ಆಂಬುಲೆನ್ಸ್ ಕಳುಹಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಗೆ ತಯಾರಾಗಿರಿ ಎಂದು ಸುತ್ತಮುತ್ತಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
–ದೇವೇಂದ್ರ ಘಡಣವೀಸ್, ಮುಖ್ಯಮಂತ್ರಿ
जळगाव जिल्ह्यातील पाचोरानजीक एका अत्यंत दुर्दैवी घटनेत काही लोकांचा मृत्यू झाल्याची घटना अतिशय वेदनादायी आहे. मी त्यांना भावपूर्ण श्रद्धांजली अर्पण करतो. माझे सहकारी मंत्री गिरीश महाजन तसेच पोलिस अधीक्षक हे घटनास्थळी पोहोचले असून, जिल्हाधिकारी काही वेळात तेथे पोहोचत आहेत. संपूर्ण…