ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನನ್ನನ್ನು ಕತ್ತಲೆಯಲ್ಲಿಟ್ಟಿದೆ: ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಆರೋಪ

ಶಾಸಕಾಂಗವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತದೆ ಆರಿಫ್‌ ಮೊಹಮ್ಮದ್‌ ಖಾನ್‌ ಆರೋಪ
Published 7 ನವೆಂಬರ್ 2023, 13:57 IST
Last Updated 7 ನವೆಂಬರ್ 2023, 13:57 IST
ಅಕ್ಷರ ಗಾತ್ರ

ತಿರುವನಂತಪುರ: ‘ರಾಜ್ಯ ಸರ್ಕಾರವು ಶಾಸಕಾಂಗವನ್ನು ಇತರ ಉದ್ದೇಶಗಳಿಗೆ ಬಳಸುತ್ತಿದೆ ಮತ್ತು ಹಲವು ವಿಷಯಗಳಲ್ಲಿ ನನ್ನನ್ನು ಕತ್ತಲೆಯಲ್ಲಿಟ್ಟಿದೆ’ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಮಂಗಳವಾರ ಆರೋಪಿಸಿದರು.

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕುರಿತು ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು, ಒಟ್ಟಾಗಿ ಕೆಲಸ ಮಾಡಬೇಕು. ಆದರೆ, ಸರ್ಕಾರ ನಮ್ಮನ್ನು ಕತ್ತಲೆಯಲ್ಲಿ ಇರಿಸಿದಾಗ ಅಥವಾ ಶಾಸಕಾಂಗವನ್ನು ಅದರ ಉದ್ದೇಶಕ್ಕೆ ಬದಲಾಗಿ ಅನ್ಯ ಉದ್ದೇಶಗಳಿಗೆ ಬಳಸಿದಾಗ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘‌ಸರ್ಕಾರ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾನೂನುಗಳನ್ನು ಅಂಗೀಕರಿಸಿದಾಗ ನಾವೇನು ಮಾಡಬೇಕು? ಅವರು ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದ್ದು ಸ್ಪಷ್ಟವಾಗಿದ್ದಾಗಲೂ ಅದನ್ನು ನಾನು ಒಪ್ಪಬೇಕಾ?’ ಎಂದು ಅವರು ಕೇಳಿದರು.

‘ಸುಪ್ರೀಂಕೋರ್ಟ್‌ ಹೇಳಿದ್ದನ್ನು ಎಲ್ಲರೂ ಗೌರವಿಸುತ್ತಾರೆ ಮತ್ತು ಬದ್ಧರಾಗಿರುತ್ತಾರೆ’ ಎಂದ ಅವರು, ‘ಅದು ತೀರ್ಪಿನ ರೂಪದಲ್ಲಿರಬೇಕು’ ಎಂದೂ ಹೇಳಿದರು.

‘ಸುಪ್ರೀಂಕೋರ್ಟ್‌ನ ಕೆಲವು ಅಭಿಪ್ರಾಯ, ಅವಲೋಕನಗಳ ಬಗ್ಗೆ ನಾನು ಪ್ರತಿಕ್ರಿಯಿಸಿಲು ಸಾಧ್ಯವಿಲ್ಲ. ಏಕೆಂದರೆ ಅದು ಬೇರೆಯದೇ ಪ್ರಕರಣ. ಸುಪ್ರೀಂಕೋರ್ಟ್‌ ನೀಡುವ ಯಾವುದೇ ತೀರ್ಪವನ್ನು ಜಾರಿಗೊಳಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ’ ಎಂದು ಅವರು ತಿಳಿಸಿದರು.

ಕೆಲ ಮಸೂದೆಗಳನ್ನು ತಡೆಹಿಡಿದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾನೂನಿನ ಮಿತಿಗಳನ್ನು ಉಲ್ಲಂಘಿಸುವಂತಹ ಕಾರ್ಯಗಳನ್ನು ಮಾಡುವಂತೆ ಸಹಜವಾಗಿ ಯಾರೂ ಕೇಳಲು ಸಾಧ್ಯವಿಲ್ಲ. ಇದನ್ನು ನಾನು ಪದೇ ಪದೇ ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT