ಕೋಲ್ಕತ್ತ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ‘ಮಹಾ ಕುಂಭ’ದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅದು ‘ಮೃತ್ಯು ಕುಂಭ’ವಾಗಿ ಪರಿವರ್ತನೆ ಆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ದೂರಿದರು.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾಲ್ತುಳಿತದಲ್ಲಿ ಮೃತಪಟ್ಟವರ ನೈಜ ಸಂಖ್ಯೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕಳೆದ ತಿಂಗಳು ಪ್ರಯಾಗರಾಜ್ನಲ್ಲಿ ಸಂಭವಿಸಿದ ಕಾಲ್ತುಳಿದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟು, 60 ಜನರು ಗಾಯಗೊಂಡಿದ್ದರು. ಅಲ್ಲದೆ ಇತ್ತೀಚೆಗೆ ನವದೆಹಲಿಯ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ 18 ಜನರು ಅಸುನೀಗಿದ್ದರು.

ಆಧಾರರಹಿತ ಆರೋಪ: ‘ಬಿಜೆಪಿಯುವರು ನನ್ನನ್ನು ಮುಸ್ಲಿಂ ಲೀಗ್ನ ಸದಸ್ಯೆ ಎಂದು ಆರೋಪಿಸಿದ್ದಾರೆ. ಇದು ಆಧಾರರಹಿತ ಆರೋಪವಾಗಿದ್ದು, ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಅವರು ಹೇಳಿದರು.

‘ನಾನು ಜಾತ್ಯತೀತತೆ, ಸಹಬಾಳ್ವೆಗೆ ಬದ್ಧವಾಗಿದ್ದೇನೆ ಮತ್ತು ಎಲ್ಲ ಸಮುದಾಯದವರ ಬೆಳವಣಿಗೆಯನ್ನು ಬಯಸುತ್ತೇವೆ’ ಎಂದು ಅವರು ಪ್ರತಿಪಾದಿಸಿದರು.

ಮಮತಾ ಸವಾಲು: ‘ನನಗೆ ಬಾಂಗ್ಲಾದೇಶದ ಭಯೋತ್ಪಾದಕರು ಅಥವಾ ಮೂಲಭೂತವಾದಿಗಳ ಜತೆ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಆರೋಪಗಳಿಗೆ ಅವರು ಸಾಕ್ಷ್ಯಗಳನ್ನು ಒದಗಿಸಲಿ’ ಎಂದು ಅವರು ಸವಾಲು ಹಾಕಿದರು.

‘ಒಂದು ವೇಳೆ ಅವರ ಅರೋಪ ಸತ್ಯವಾಗಿದ್ದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಮಮತಾ ಹೇಳಿದರು.

ಉ.ಪ್ರ: ರಾಜ್ಯಪಾಲರ ಭಾಷಣದ ವೇಳೆ ಗದ್ದಲ

ಲಖನೌ: ಉತ್ತರ ಪ್ರದೇಶದ ಜಂಟಿ ಅಧಿವೇಶವನ್ನು ಉದ್ದೇಶಿಸಿ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರು ಭಾಷಣ ಮಾಡುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿ ತೀವ್ರ ಗದ್ದಲ ಎಬ್ಬಿಸಿದರು. ಇದರ ಪರಿಣಾಮ ರಾಜ್ಯಪಾಲರು ಕೇವಲ ಎಂಟು ನಿಮಿಷಗಳಲ್ಲಿಯೇ ಭಾಷಣ ಮುಗಿಸಿದರು. ಬಜೆಟ್ ಅಧಿವೇಶನದ ಮೊದಲ ದಿನ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ‘ಗವರ್ನರ್ ಗೋ ಬ್ಯಾಕ್’ ಮತ್ತು ‘ಕುಂಭಮೇಳದಲ್ಲಿ ಮೃತಪಟ್ಟವರ ಖಚಿತ ಮಾಹಿತಿ ನೀಡಿ’ ಎಂದು ಸಮಾಜವಾದಿ ಪಕ್ಷದ ಶಾಸಕರು ಘೋಷಣೆಗಳನ್ನು ಕೂಗಿದರು. ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ ಕಾರಣ ಅಧಿವೇಶವನ್ನು ಬೆಳಿಗ್ಗೆ 11.22ರಿಂದ 12.30ರವರೆಗೆ ಮುಂದೂಡಬೇಕಾಯಿತು. ಸಮಾಜವಾದಿ ಪಕ್ಷದ ಸದಸ್ಯರು ಮಂಗಳವಾರ ವಿಧಾನಸಭೆಯ ಆವರಣದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಂಭಲ್ ಪ್ರಕರಣ ಮತ್ತು ಕುಂಭಮೇಳದ ಕಾಲ್ತುಳಿತ ಪ್ರಕರಣ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬ್ಯಾನರ್ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

‘ಸರ್ಕಾರದ ನೈತಿಕತೆ ಸತ್ತಿದೆ’: ‘ನೈತಿಕತೆಯ ಅಸ್ಥಿ ಕಲಶ’ ಎಂಬ ಘೋಷಣೆ ಹೊಂದಿರುವ ಕಲಶವನ್ನು ಹೊತ್ತು ಸಮಾಜವಾದಿ ಪಕ್ಷದ ನಾಯಕ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಅಶುತೋಷ್ ಸಿನ್ಹಾ ಅವರು ಮಂಗಳವಾರ ಬೈಸಿಕಲ್ ಮೂಲಕ ಅಧಿವೇಶನಕ್ಕೆ ಬಂದರು. ಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ಸರ್ಕಾರ ನೀಡುತ್ತಿಲ್ಲ ಎಂದು ಅವರು ಉತ್ತರ ಪ್ರದೇಶ ಸರ್ಕಾರವನ್ನು ಈ ವೇಳೆ ತರಾಟೆಗೆ ತೆಗೆದುಕೊಂಡರು. ಬೈಸಿಕಲ್ನಲ್ಲಿ ಮೂರು ಕಿ.ಮೀಗೂ ಹೆಚ್ಚು ದೂರ ಕ್ರಮಿಸಿದ ಅವರು ‘ನಾನು ನೈತಿಕತೆಯ ಅಸ್ಥಿ ಕಲಶವನ್ನು ಹೊತ್ತು ಇಲ್ಲಿಗೆ ತಂದಿದ್ದೇನೆ. ಆದರೆ ಸರ್ಕಾರದ ನೈತಿಕತೆ ಸತ್ತುಹೋಗಿದೆ. ಸಂವೇದಿಸಬೇಕಾದ ಸರ್ಕಾರ ಮುಚ್ಚುಮರೆ ಮಾಡುತ್ತಿದೆ’ ಎಂದು ಸಿನ್ಹಾ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.