ಸುಕ್ಮಾ: ತಲೆಗೆ ₹36 ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದುಧಿ ಪೊಜ್ಜ ಹಾಗೂ ಅವರ ಪತ್ನಿ ದುಧಿ ಪೊಜ್ಜೆ, ಅಯಾಟೆ ಕೊರ್ಸೆ ಅಲಿಯಾಸ್ ಜಯಕ್ಕಾ, ಕವಾಸಿ ಮುಡ, ಕರಮ್ ನರಣ್ಣ ಅಲಿಯಾಸ್ ಭೂಮಾ ಹಾಗೂ ಮಡ್ಕಂ ಸುಕ್ಕ ಅಲಿಯಾಸ್ ರೈನು ಶರಣಾದ ನಕ್ಸಲರು.
.ಛತ್ತೀಸಗಢ ಗಡಿಯಲ್ಲಿ ನಕ್ಸಲ್ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ.
ಮಾವೋವಾದಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ನಂಬರ್ 1 ಹಾಗೂ ಪೀಪಲ್ಸ್ ಪಾರ್ಟಿ ಕಮಿಟಿ ಸದಸ್ಯರಾಗಿದ್ದ ಪೊಜ್ಜ ಅವರ ತಲೆಗೆ ₹8 ಲಕ್ಷ ಹಾಗೂ ಅವರ ಪತ್ನಿ ಪೊಜ್ಜೆ ಅವರ ತಲೆಗೂ ₹8 ಲಕ್ಷ ಬಹುಮಾನ ಘೋಷಣೆಯಾಗಿತ್ತು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.

ಕಿಸ್ತರಾಮ್ ಸಮಿತಿಯ ಕಾಮ್ರೆಡ್ ಹಾಗೂ ಏರಿಯಾ ಕಮಿಟಿ ಸದಸ್ಯರಾದ ಜಯಕ್ಕ ಅವರ ತಲೆಗೆ ₹5 ಲಕ್ಷ, ಮುಡ ಹಾಗೂ ಭೂಮಾ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು.
.ಶಂಕಿತ ನಕ್ಸಲ್ ಸುರೇಶ್ ಬಂಧನ: ಐಸಿಯುನಲ್ಲಿ ಚಿಕಿತ್ಸೆ.
ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಜಿಲ್ಲಾ ಪೊಲೀಸರ ‘ಹೊಸ ಉದಯ’ ಯೋಜನೆಯಿಂದ ಪ್ರೇರಣೆಗೊಂಡು ಇವರು ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯಡಿ ಅವರಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.
.ನಕ್ಸಲ್ ನಿಗ್ರಹ ಕಾರ್ಯಾಚರಣೆ: ಮಗು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.