ಬದಲಾಗಲಿದೆ ಮತಗಟ್ಟೆ, ವಿಭಾಗ
ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ, ವಿಭಾಗಗಳು ಬದಲಾಗಲಿವೆ. ಒಂದು ಕಟ್ಟಡ, ಒಂದು ಬೀದಿ, ಒಂದು ಮತಗಟ್ಟೆ ವಿಭಾಗದಲ್ಲಿ ವಾಸಿಸುತ್ತಿರುವ ಎಲ್ಲ ಮತದಾರರು ಒಂದೇ ಮತಗಟ್ಟೆ ಮತ್ತು ವಿಭಾಗಕ್ಕೆ ಒಳಪಡುವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಒಂದು ಮತಗಟ್ಟೆಯಲ್ಲಿ 1,200ಕ್ಕಿಂತಲೂ ಹೆಚ್ಚು ಮತದಾರರು ಇರಬಾರದು. ಪ್ರತಿ ಮತಗಟ್ಟೆಗೆ 1,200 ಮತದಾರರನ್ನು ಮಿತಿಗೊಳಿಸಿ, ಹೊಸಮತಗಟ್ಟೆಗಳನ್ನು ರಚಿಸಲಾಗುತ್ತದೆ.