ವಾಷಿಂಗ್ಟನ್/ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ತನಿಖೆಗಾಗಿ ಭಾರತಕ್ಕೆ ತಂಡವನ್ನು ಕಳುಹಿಸುವುದಾಗಿ ನಾಗರಿಕ ವಿಮಾನ ಅಪಘಾತಗಳ ತನಿಖೆ ನಡೆಸುವ ಸರ್ಕಾರಿ ಸಂಸ್ಥೆಯಾದ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್ಟಿಎಸ್ಬಿ) ಹೇಳಿಕೊಂಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ನೇತೃತ್ವದಲ್ಲಿ ತನಿಖಾ ತಂಡವನ್ನು ಕಳುಹಿಸುವುದಾಗಿ ಅದು ಹೇಳಿದೆ.

ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅನುಬಂಧ 13ರ ಅಡಿಯಲ್ಲಿ ಅಂತರರಾಷ್ಟ್ರೀಯ ಶಿಷ್ಟಾಚಾರಗಳ ಪ್ರಕಾರ ತನಿಖೆಯ ಎಲ್ಲ ಮಾಹಿತಿಯನ್ನು ಭಾರತವು ಒದಗಿಸುತ್ತದೆ ಎಂದು ಎನ್ಟಿಎಸ್ಬಿ ಹೇಳಿದೆ.

ಭಾರತಕ್ಕೆ ಬೇಕಾದರೆ ತನಿಖೆ ಹಾಗೂ ತಾಂತ್ರಿಕ ನೆರವು ಒದಗಿಸಲು ಸಿದ್ಧವಿರುವುದಾಗಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಹೇಳಿಕೊಂಡಿತ್ತು. ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಎನ್ಟಿಎಸ್ಬಿ ಜತೆ ಸಂಪರ್ಕದಲ್ಲಿರುವುದಾಗಿ ಎಫ್ಎಎ ತಿಳಿಸಿದೆ.

ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಕನಿಷ್ಠ 265 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
.Ahmedabad Plane Crash | ಟೇಕಾಫ್ ಆದ 25 ಸೆಕೆಂಡುಗಳಲ್ಲಿ ಪತನಗೊಂಡ ಏರ್ ಇಂಡಿಯಾ.Ahmedabad Plane Crash: ವಿಶ್ವದ ಕೆಲವು ಪ್ರಮುಖ ವಿಮಾನ ದುರಂತಗಳು.ಅಹಮದಾಬಾದ್ | ದೇಶದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ: ಕನಿಷ್ಠ 265 ಸಾವು.Ahmedabad Plane Crash: ವಿಮಾನ ದುರಂತದಲ್ಲಿ ಪಾರಾದ ಬ್ರಿಟನ್ ಪ್ರಜೆ ವಿಶ್ವಾಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.