ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇ 26ರಷ್ಟು ಪ್ರತಿ ಸುಂಕ ಹೇರಿ ಬುಧವಾರ ಆದೇಶಿಸಿದ್ದಾರೆ.

ಈ ಪ್ರತಿ ಸುಂಕ ಏಪ್ರಿಲ್ 9ರಿಂದ ಅನ್ವಯವಾಗಲಿದೆ ಎಂದು ಶ್ವೇತಭವನ ತಿಳಿಸಿದೆ.
.ಟ್ರಂಪ್ ಸುಂಕ ಹೇರಿಕೆ ಆತಂಕ: ಸೆನ್ಸೆಕ್ಸ್ 1,390 ಅಂಶಗಳಷ್ಟು ಕುಸಿತ.
‘ಅವರು (ಭಾರತ) ನಮಗೆ ಶೇ 52ರಷ್ಟು ತೆರಿಗೆ ಹಾಕುತ್ತಿದ್ದಾರೆ. ಆದರೆ ನಾವು ಕಳೆದ ಹಲವು ದಶಕಗಳಿಂದ ಯಾವ ತೆರಿಗೆಯೂ ಹಾಕಿಲ್ಲ’ ಎಂದು ತೆರಿಗೆ ವಿಧಿಸುವ ಘೋಷಣೆ ವೇಳೆ ಟ್ರಂಪ್ ಹೇಳಿದ್ದಾರೆ.

ಈ ಸುಂಕ ಹೇರಿಕೆಯು ತೆರಿಗೆ ಹಾಗೂ ತೆರಿಗೆಯೇತರ ನಿರ್ಬಂಧಗಳ ಮೇಲೆಯೂ ಅನ್ವಯವಾಗಲಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.

ಭಾರತವು ಅಮೆರಿಕದ ವಿರುದ್ಧ ಭಾರಿ ತೆರಿಗೆಯೇತರ ನಿರ್ಬಂಧಗಳನ್ನು ವಿಧಿಸಿದ್ದು, ಅದನ್ನು ರದ್ದು ಮಾಡಿದರೆ ಅಮೆರಿಕದ ರಫ್ತು ವಾರ್ಷಿಕವಾಗಿ $5.3 ಬಿಲಿಯನ್ನಷ್ಟು ಏರಿಕೆಯಾಗಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
.ಕೃಷಿ ಉತ್ಪನ್ನಕ್ಕೆ ಸುಂಕ ಕಡಿತ?: ಟ್ರಂಪ್ ಬರೆ ತಪ್ಪಿಸಿಕೊಳ್ಳಲು ಭಾರತ ಕಸರತ್ತು.
ವ್ಯಾಪಾರ ಕೊರತೆ ಹಾಗೂ ಉತ್ಪನ್ನಗಳಿಗೆ ಪರಸ್ಪರ ವಿಧಿಸುವ ತೆರಿಗೆ ಸಮಾಧಾನಕರವಾಗಿರಲಿದೆ ಎಂದು ಟ್ರಂಪ್ ನಿರ್ಧರಿಸುವವರೆಗೆ ಈ ಸುಂಕಗಳು ಜಾರಿಯಲ್ಲಿರಲಿವೆ ಎಂದು ಪ್ರಕಟಣೆ ಹೇಳಿದೆ.

ಭಾರತದೊಂದಿಗೆ ಅಮೆರಿಕ $46 ಬಿಲಿಯನ್ ವ್ಯಾಪಾರ ಕೊರತೆ ಹೊಂದಿದೆ.
.48 ರಾಷ್ಟ್ರಗಳಿಂದ ಭಾರತಕ್ಕೆ ಚಿನ್ನ ಆಮದು; ಸುಂಕ ಎಷ್ಟು?: ಮಾಹಿತಿ ನೀಡಿದ ಸರ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.