ನವದೆಹಲಿ: ಭಾರತವು 2023–24ನೇ ಸಾಲಿನಲ್ಲಿ 48 ರಾಷ್ಟ್ರಗಳಿಂದ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇವೆಲ್ಲವೂ ಪ್ರತ್ಯೇಕ ಆಮದು ಸುಂಕ ಹೊಂದಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಶುಕ್ರವಾರ ಹೇಳಿದೆ.

ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್, ‘ಭಾರತ ವಿಧಿಸುವ ಆಮದು ಸುಂಕವು ಅತ್ಯಂತ ಒಲವುಳ್ಳ ರಾಷ್ಟ್ರಗಳು ಅಥವಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳಿಗೆ ಅನ್ವಯಿಸಲಿದೆ’ ಎಂದಿದ್ದಾರೆ.

‘ಚಿನ್ನದ ಮೇಲೆ ಶೇ 6ರಷ್ಟು ಆಮದು ಸುಂಕ, ಸಂಸ್ಕರಿಸದ ಚಿನ್ನದ ಮೇಲೆ ಶೇ 5.35ರಷ್ಟು ತೆರಿಗೆ ವಿಧಿಸಲಾಗಿತ್ತು. ಆಸೀನ್, ಕೊರಿಯಾ, ಜಪಾನ್ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವ ಚಿನ್ನಕ್ಕೆ ಶೂನ್ಯ ಆಮದು ಸುಂಕ ವಿಧಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸಂಯುಕ್ತ ಅರಬ್ ರಾಷ್ಟ್ರದೊಂದಿಗೆ ಮಾಡಿಕೊಂಡಿರುವ ಒಪ್ಪಂದದನ್ವಯ ಶೇ 5ರಷ್ಟು ಸುಂಕವನ್ನು ಚಿನ್ನದ ಮೇಲೆ. ಸಂಸ್ಕರಿಸದ ಚಿನ್ನದ ಮೇಲೆ ಶೇ 4.35ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದು 160 ಟನ್ವರೆಗಿನ ಆಮದು ಮಿತಿಗೆ ಮಾತ್ರ ಅನ್ವಯ. ಇದನ್ನು ಮೀರಿದರೆ ರಿಯಾಯಿತಿ ಇಲ್ಲ’ ಎಂದು ಜಿತಿನ್ ಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.