ಸಿಂಗಪುರ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವೆ ನಡೆಯುತ್ತಿರುವ ಕದನದ ಬಗ್ಗೆ ಚರ್ಚಿಸಲು ಅರಬ್, ಇಸ್ಲಾಮಿಕ್ ಹಾಗೂ ಆಫ್ರಿಕನ್ ದೇಶಗಳ ಶೃಂಗಸಭೆ ಆಯೋಜಿಸಲಾಗುವುದು ಎಂದು ಸೌದಿ ಅರೇಬಿಯಾದ ಬಂಡವಾಳ ಸಚಿವ ಖಾಲಿದ್ ಅಲ್–ಫಾಲಿಹ್ ಮಂಗಳವಾರ ಹೇಳಿದ್ದಾರೆ.

‘ಕೆಲ ದಿನಗಳಲ್ಲಿ ಸೌದಿ ಅರೇಬಿಯಾವು ರಿಯಾದ್‌ನಲ್ಲಿ ತುರ್ತು ಅರಬ್ ಸಮ್ಮಿಟ್ ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.
.Israel Hamas War | ಗಾಜಾ ಪಟ್ಟಿಯನ್ನು ಇಬ್ಭಾಗ ಮಾಡಿದ್ದೇವೆ: ಇಸ್ರೇಲ್ ಸೇನೆ.
‘ಕೆಲ ದಿನಗಳಲ್ಲಿ ರಿಯಾದ್‌ನಲ್ಲಿ ಸೌದಿ ಅರೇಬಿಯಾವು ಆಫ್ರಿಕಾ–ಸೌದಿ ಶೃಂಗ ಆಯೋಜಿಸುವುದನ್ನು ನೀವು ನೋಡಲಿದ್ದೀರಿ. ಅದಾದ ಬಳಿಕ ಇಸ್ಲಾಮಿಕ್ ಸಮ್ಮೇಳನವೂ ನಡೆಯಲಿದೆ’ ಎಂದು ಅವರು ತಿಳಿಸಿದರು.

‘ಚುಟುಕಾಗಿ ಹೇಳುವುದಾದರೆ, ಸೌದಿ ಅರೇಬಿಯಾದ ನಾಯಕತ್ವದಲ್ಲಿ ನಡೆಯುವ ಈ ಮೂರು ಸಮ್ಮೇಳನ ಹಾಗೂ ಇತರ ಅಧಿವೇಶನದ ಮೂಲಕ ಸಂಘರ್ಷಕ್ಕೆ ಶಾಂತಿಯಯುತ ಪರಿಹಾರ ನೀಡುವ ಉದ್ದೇಶ ಹೊಂದಿದೆ’ ಎಂದು ಅವರು ಹೇಳಿದ್ದಾರೆ.
.ಸೀಮೋಲ್ಲಂಘನ: ಇಸ್ರೇಲ್– ಹಮಾಸ್ ಸಮರ, ಮುಂದೆ?.
ಇಸ್ಲಾಮಿಕ್ ಸಹಕಾರ ಸಂಘಟನೆಯ ಶೃಂಗದಲ್ಲಿ ಭಾಗಿಯಾಗಲು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ ಸೌದಿ ಅರೇಬಿಯಾಗೆ ತೆರಳಲಿದ್ದಾರೆ. ಸೌದಿ ಹಾಗೂ ಇರಾನ್ ನಡುವೆ ಇದ್ದ ಹಲವು ವರ್ಷಗಳ ವೈಷ್ಯಮ್ಯವನ್ನು ಚೀನಾ ಮಧ್ಯಸ್ಥಿಕೆ ವಹಿಸಿ ಅಂತ್ಯಗೊಳಿಸಿತ್ತು. ಇದಾದ ಬಳಿಕ ಇರಾನ್ ಅಧ್ಯಕ್ಷರೊಬ್ಬರು ಸೌದಿಗೆ ಪ್ರಯಾಣಿಸುತ್ತಿರುವುದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.