ಶುಕ್ರವಾರ, 9 ಜನವರಿ 2026
×
ADVERTISEMENT
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ
ಬೃಹತ್ ಪ್ರಮಾಣದ ತೈಲ ಸಂಪನ್ಮೂಲಗಳ ಮೇಲೆ ಕಣ್ಣು
ಫಾಲೋ ಮಾಡಿ
Published 5 ಜನವರಿ 2026, 1:49 IST
Last Updated 5 ಜನವರಿ 2026, 1:49 IST
Comments
ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಆಡಳಿತವು ದಕ್ಷಿಣ ಅಮೆರಿಕದ ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ ಅವರನ್ನು ‘ಸೆರೆ’ ಹಿಡಿದು ಅಮೆರಿಕಕ್ಕೆ ಕರೆದೊಯ್ದಿದೆ. ಹಲವು ದೇಶಗಳು ಅಮೆರಿಕದ ನಡೆಯನ್ನು ಖಂಡಿಸಿದರೂ ವಲಸೆ, ಮಾದಕ ವಸ್ತುಗಳು ಮತ್ತು ಮಾದಕವಸ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ, ಮೇಲ್ನೋಟಕ್ಕೆ ಇದು ಕಾರಣ ಎಂದು ಕಂಡರೂ ಈ ಕಾರ್ಯಾಚರಣೆಯ ಹಿಂದೆ ಬೇರೆಯದೇ ಉದ್ದೇಶಗಳಿವೆ. ವೆನೆಜುವೆಲಾದ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಲೇ ಇತ್ತು. ಚೀನಾ, ರಷ್ಯಾಗಳಿಗೆ ಹತ್ತಿರವಾಗಿ ತನ್ನ ವಿರುದ್ಧ ತೊಡೆ ತಟ್ಟಿರುವ ವೆನೆಜುವೆಲಾ ಸರ್ಕಾರವನ್ನು ಕಿತ್ತು ಒಗೆದು, ಅಲ್ಲಿ ತನ್ನನ್ನು ಬೆಂಬಲಿಸುವ ಸರ್ಕಾರವನ್ನು ಸ್ಥಾಪಿಸುವುದು ಅಮೆರಿಕದ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT