ಶ್ರೀಹರಿಕೋಟಾ: ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವಂಥ (ಡಾಕಿಂಗ್) ಸ್ಪೇಡೆಕ್ಸ್ ಯೋಜನೆಗಾಗಿ ಎರಡು ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಅನ್ನು ಸೋಮವಾರ ರಾತ್ರಿ 10 ಗಂಟೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್‘ ಮತ್ತು ‘ಅನ್ಡಾಕಿಂಗ್’ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ತರ ಯೋಜನೆ ಇದಾಗಿದೆ.

ನೌಕೆಯು ‘ಸ್ಪೇಡೆಕ್ಸ್-ಎ’ ಹಾಗೂ ‘ಸ್ಪೇಡೆಕ್ಸ್-ಬಿ’ ಎರಡು ಉಪಗ್ರಹ ವನ್ನು ಹೊತ್ತೊಯ್ದಿದೆ. ಇವೇ ಎರಡು ಉಪಗ್ರಹಗಳನ್ನು ಜೋಡಿಸಲಾಗುತ್ತದೆ. ಈ ಮೊದಲು ಸೋಮವಾರ ರಾತ್ರಿ 9.58ಕ್ಕೆ ಉಡ್ಡಯನ ಮಾಡಲು ನಿರ್ಧರಿಸಲಾಗಿತ್ತು. ಯಾಕಾಗಿ ಎರಡು ನಿಮಿಷ ತಡವಾಗಿ ಉಡ್ಡಯನ ಮಾಡಲಾಗಿದೆ ಎಂಬುದನ್ನು ಇಸ್ರೊ ಬಹಿರಂಗಪಡಿಸಿಲ್ಲ.

‘ಈ ಕಾರ್ಯಕ್ರಮವು ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ತಂತ್ರಜ್ಞಾನವನ್ನು ಹೊಂದಿರುವ ಕೆಲವೇ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಲಿದೆ’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ತಂತ್ರಜ್ಞಾನವನ್ನು ಹೊಂದಿರುವ ದೇಶಗಳಾಗಿವೆ.
.ISRO ಡಾಕಿಂಗ್ ಪ್ರಯೋಗ ಇಂದು: ಯಶಸ್ವಿಯಾದರೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.