ಮೈಸೂರು: ಬಿಜೆಪಿಯ ಸಂಸದ ಪ್ರತಾಪ ಸಿಂಹ ಇಲ್ಲಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಕಲಾಗಿರುವ ಬಾವುಟಗಳ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ನ ತಮ್ಮ ಖಾತೆಯಲ್ಲಿ ಫೋಟೊ ಸಹಿತ ಪೋಸ್ಟ್ ಹಾಕಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಉದ್ಯಾನದಲ್ಲಿ ಟಿಪ್ಪುಬಾವುಟ ಹಾಕಿದ್ದಾರಲ್ಲಾ ಅವರು ಯಾರ ಅನುಮತಿ ಪಡೆದಿದ್ದಾರೆ ಸಿದ್ದರಾಮಯ್ಯನವರೇ, ಪರಮೇಶ್ವರರೇ?’ ಎಂದು ಮಂಗಳವಾರ ಹಾಕಿದ್ದ ಪೋಸ್ಟ್ನಲ್ಲಿ ಕೇಳಿದ್ದರು.

ಬುಧವಾರ ಪೋಸ್ಟ್ ಹಾಕಿರುವ ಅವರು, ‘ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಆದರೆ ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ? ಕೈಲಾಸಪುರಂ 4ನೇ ಮುಖ್ಯರಸ್ತೆ, ಅಂಬೇಡ್ಕರ್ ಉದ್ಯಾನ, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜ ಇರುವುದು ಕಾಣುತ್ತಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಅವರ ಪೋಸ್ಟ್ಗೆ ಪರ–ವಿರೋಧ ಚರ್ಚೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.