ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್ ಮೇಲೆ ಗುಂಡಿಕ್ಕಿದ ವ್ಯಕ್ತಿ ರಿಪಬ್ಲಿಕನ್ ಎಂದು ನೋಂದಾಯಿಸಿಕೊಂಡಿದ್ದ!

Published : 14 ಜುಲೈ 2024, 10:43 IST
Last Updated : 14 ಜುಲೈ 2024, 10:43 IST
ಫಾಲೋ ಮಾಡಿ
Comments

ವಾಷಿಂಗ್ಟನ್‌: ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿಕ್ಕಿ ಕೊಲೆಯತ್ನ ಮಾಡಿದ್ದ 20 ವರ್ಷದ ಥೋಮಸ್ ಮ್ಯಾಥ್ಯೂ ಕ್ರೂಕ್ಸ್‌, ರಿಪಬ್ಲಿಕನ್ ಎಂದು ನೋಂದಣಿ ಮಾಡಿಕೊಂಡಿದ್ದನು. ನವೆಂಬರ್‌ನಲ್ಲಿ ನಡೆಯಬೇಕಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವವನಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್ ಅವರ ಸಮಾವೇಶ ನಡೆದ ಸ್ಥಳದಿಂದ 56 ಕಿ.ಮೀ ದೂರದಲ್ಲಿರುವ ಬೆಥೆಲ್ ಪಾರ್ಕ್‌ನ ಪಿಟ್ಸ್‌ಬರ್ಗ್ ಹೊರವಲಯದ ನಿವಾಸಿ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸಮಾವೇಶ ನಡೆದಿದ್ದ ಸ್ಥಳದ ಸಮೀಪ ಕ್ರೂಕ್ಸ್‌ನನ್ನು ಅಮೆರಿಕದ ಸಿಕ್ರೇಟ್ ಸರ್ವಿಸ್ ಸಿಬ್ಬಂದಿ ಪಡೆಯು ಕೊಂದು ಹಾಕಿದೆ.

2022ರಲ್ಲಿ ಬೆಥೆಲ್ ಪಾರ್ಕ್ ಹೈಸ್ಕೂಲ್‌ನಿಂದ ಪದವಿ ಪಡೆದಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಪೆನ್ಸೆಲ್ವೇನಿಯಾ ರಾಜ್ಯದ ಮತದಾರ ಪಟ್ಟಿಯಲ್ಲಿ ರಿಪಬ್ಲಿಕನ್ ಮತದಾರ ಎಂದು ಕ್ರೂಕ್ಸ್ ನೊಂದಣಿ ಮಾಡಿಕೊಂಡಿದ್ದಾನೆ. 2021ರ ಜನವರಿಯಲ್ಲಿ ಕ್ರೂಕ್ಸ್ ಇದೇ ವಿಳಾಸ ನೀಡಿ, ಡೆಮಾಕ್ರಟಿಕ್‌ ಪಕ್ಷಕ್ಕೆ ಸಂಬಂಧಿಸಿದ ಸಂಸ್ಥೆಯೊಂದಕ್ಕೆ $15 ಡಾಲರ್‌ ದೇಣಿಗೆಯನ್ನೂ ನೀಡಿದ್ದ. ಆತನ ಚಿತ್ರ, ವರ್ಷ, ವಿಳಾಸವನ್ನು ಕಾನೂನು ಜಾರಿ ಸಂಸ್ಥೆಗಳು ಪತ್ತೆ ಹಚ್ಚಿವೆ.

‘ಆತ ಏನು ಮಾಡುತ್ತಿದ್ದ ಎಂದು ನಮಗೆ ತಿಳಿದಿರಲಿಲ್ಲ. ಕಾನೂನು ಜಾರಿ ಸಂಸ್ಥೆಯೊಂದಿಗೆ ಮಾತನಾಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಕ್ರೂಕ್ಸ್‌ ತಂದೆ ಮ್ಯಾಥ್ಯೂ ಕ್ರೂಕ್ಸ್‌ ಹೇಳಿದ್ದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT