ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌: ಹಮಾಸ್‌ನ ಪರಮೋಚ್ಛ ನಾಯಕ ಇಸ್ಮಾಯಿಲ್‌ ಹನಿಯೆ ಹತ್ಯೆ

Published : 31 ಜುಲೈ 2024, 11:56 IST
Last Updated : 31 ಜುಲೈ 2024, 11:56 IST
ಫಾಲೋ ಮಾಡಿ
Comments
ಈ ಹತ್ಯೆಯನ್ನು ಖಂಡಿಸುತ್ತೇನೆ. ಇದು ಹೇಡಿಗಳ ಕೃತ್ಯ ಮತ್ತು ಅಪಾಯಕಾರಿ ಬೆಳವಣಿಗೆ
ಮಹಮ್ಮದ್‌ ಅಬ್ಬಾಸ್‌ ಪ್ಯಾಲೆಸ್ಟೀನ್‌ ಅಧ್ಯಕ್ಷ
ಯಾರೀ ಹಾನಿಯಾ?
1963ರ ಜನವರಿ 29ರಂದು ಗಾಜಾದಲ್ಲಿ ಜನಿಸಿದ ಹನಿಯೆ ಅವರು 1987ರಲ್ಲಿ ಹಮಾಸ್‌ ಬಂಡುಕೋರ ಸಂಘಟನೆ ಸೇರಿದ್ದರು. ಸಂಸ್ಥಾಪಕ ಅಹ್ಮದ್‌ ಯಾಸಿನ್‌ ಅವರ ಸಹಾಯಕನಾಗಿ ಕೆಲಸ ಮಾಡಿದ್ದರು. ನಂತರ ಸಂಘಟನೆಯಲ್ಲಿ ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡಿ 2017ರಲ್ಲಿ ಹಮಾಸ್‌ನ ಅತ್ಯುನ್ನತ ರಾಜಕೀಯ ನಾಯಕ ಹುದ್ದೆಗೇರಿದ್ದರು. ಆಸ್ತಿಕರಾಗಿದ್ದ ಹನಿಯೆ ಅತ್ಯುತ್ತಮ ವಾಗ್ಮಿಯೂ ಹೌದು. ಗಾಜಾದಲ್ಲಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡುತ್ತಿದ್ದರು. 2019ರಲ್ಲಿ ಗಾಜಾ ತೊರೆದು ಸ್ವಯಂಪ್ರೇರಿತರಾಗಿ ಗಡೀಪಾರಾಗಿ ಕತಾರ್‌ನಲ್ಲಿ ನೆಲೆಸಿದ್ದರು. ಜೀವ ಬೆದರಿಕೆಗಳು ಇದ್ದರೂ ಟರ್ಕಿ ಮತ್ತು ಇರಾನ್‌ಗೆ ಆಗಾಗ ಪ್ರಯಾಣಿಸುತ್ತಿದ್ದರು. ‘ಹಮಾಸ್‌ ಗುಂಪಿನ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆ ಕುರಿತ ನೀತಿ ರೂಪಿಸುವಲ್ಲಿ ಹನಿಯೆ ಮುಖ್ಯ ಪಾತ್ರ ವಹಿಸಿದ್ದರು’ ಎಂದು ಹಮಾಸ್‌ ತಜ್ಞ ಮೈಕೆಲ್‌ ಮಿಲ್‌ಶ್ತೀನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT