ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಂತ್ರ ದಿನದ ಪಥಸಂಚಲನದಲ್ಲಿ ಬಾಂಗ್ಲಾ ಸೇನೆ ಭಾಗವಹಿಸಿದ್ದೇಕೆ?

Last Updated 26 ಜನವರಿ 2021, 6:15 IST
ಅಕ್ಷರ ಗಾತ್ರ

ನವದೆಹಲಿ: ರಾಜಪಥದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾರತ ಮತ್ತು ಬಾಂಗ್ಲಾ ಸೇನಾಪಡೆಗಳು ಒಟ್ಟಿಗೆ ಭಾಗವಹಿಸಿ ಗಮನ ಸೆಳೆದವು.

ಹೌದು, 1971ರಲ್ಲಿ ನಡೆದ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಸದೆಬಡಿದಿತ್ತು. ಇದೇ ದಿನದಂದು ಬಾಂಗ್ಲಾದೇಶ ಕೂಡ ರಚನೆಯಾಯಿತು.

ಈ ಯುದ್ಧದ 50ನೇ ವಾರ್ಷಿಕೋತ್ಸವ ಜ್ಞಾಪಕಾರ್ಥವಾಗಿ ಭಾರತ ಮತ್ತು ಬಾಂಗ್ಲಾ ಸೇನಾಪಡೆಗಳು ಒಟ್ಟಿಗೆ ಪಥಸಂಚಲನದಲ್ಲಿ ಭಾಗವಹಿಸಿವೆ.

1971ರ ಮಾರ್ಚ್‌ 25ರ ಮಧ್ಯರಾತ್ರಿ ಆಗಿನ ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಮೇಲೆ ಪಾಕಿಸ್ತಾನದ ಪಡೆಗಳು ಹಠಾತ್‌ ದಾಳಿ ಮಾಡಿದವು. ಕೊನೆಗೆ ಅದೇ ವರ್ಷದ ಡಿಸೆಂಬರ್‌ 16ರಂದು ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡು ಶರಣಾಗಿತ್ತು. 9 ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ 30 ಲಕ್ಷ ಜನರು ಹತರಾಗಿದ್ದರು.

ಈ ಯುದ್ಧದಲ್ಲಿ ಭಾರತ ವಿಜಯಿಯಾದ ನೆನಪಿಗಾಗಿ ಡಿಸೆಂಬರ್ 16 ಅನ್ನು ‘ವಿಜಯ್ ದಿವಾಸ್’ ಎಂದೂ, ಇದರ 50ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT