ಬುಧವಾರ, ಜುಲೈ 6, 2022
22 °C

ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಮೀನುಗಾರರ ಸಂಖ್ಯೆ ಎಷ್ಟು ಗೊತ್ತೇ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನದ ವಶದಲ್ಲಿ ಎಷ್ಟು ಮಂದಿ ಭಾರತೀಯ ಮೀನುಗಾರರಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರವು ಲೋಕಸಭೆಗೆ ಶುಕ್ರವಾರ ನೀಡಿದೆ. ಅಲ್ಲದೇ,  ಮೀನುಗಾರರ ಬಂಧನ ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಂಡಿರುವ ಘಟನೆಗಳನ್ನು ಭಾರತ ನಿರಂತರವಾಗಿ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸುತ್ತಲೇ ಬರುತ್ತಿದೆ ಎಂದು  ಸರ್ಕಾರ ಹೇಳಿದೆ. 

 'ಭಾರತ-ಪಾಕಿಸ್ತಾನದ ನುಡುವೆ 2008ರ ಮೇ 21ರಂದು 'ದೂತವಾಸ ಪ್ರವೇಶ ಒಪ್ಪಂದ' ಆಗಿದೆ. ಅದರ ಪ್ರಕಾರ ಎರಡೂ ದೇಶಗಳ ಜೈಲುಗಳಲ್ಲಿ ಇರುವ ಎರಡೂ ಕಡೆಗಳ ನಾಗರಿಕರ, ಮೀನುಗಾರರ ಪಟ್ಟಿಗಳನ್ನು ಪ್ರತಿ ವರ್ಷದ  ಜನವರಿ 1 ಮತ್ತು ಜುಲೈ 1 ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ' ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಗೆ  ತಿಳಿಸಿದರು. 

 '2022ರ ಜನವರಿ 1 ರಂದು ವಿನಿಮಯ ಮಾಡಿಕೊಂಡ ಪಟ್ಟಿಗಳ ಪ್ರಕಾರ, ಭಾರತೀಯರು ಅಥವಾ ಭಾರತೀಯರೆಂದು ನಂಬಲಾದ 577 ಮೀನುಗಾರರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ' ಎಂದು ಮುರಳೀಧರನ್‌ ಅವರು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು. 

ಅಲ್ಲದೆ, 'ಸರ್ಕಾರದ ದಾಖಲೆಗಳ ಪ್ರಕಾರ 1,164 ಭಾರತೀಯ ಮೀನುಗಾರಿಕಾ ದೋಣಿಗಳು ಪಾಕಿಸ್ತಾನದ ವಶದಲ್ಲಿವೆ ಎಂದು ನಂಬಲಾಗಿದೆ' ಎಂದು ಸಚಿವರು ಹೇಳಿದರು. 'ಆದರೆ, ದೋಣಿಗಳನ್ನು  ವಶಪಡಿಸಿಕೊಂಡಿರುವುದನ್ನು ಪಾಕಿಸ್ತಾನ  ಒಪ್ಪಿಕೊಂಡಿಲ್ಲ' ಎಂದೂ ಅವರು ತಿಳಿಸಿದರು. 

'ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಮೀನುಗಾರರನ್ನು ಮತ್ತು ಅವರ ದೋಣಿಗಳನ್ನು ವಶದಲ್ಲಿಟ್ಟುಕೊಂಡಿರುವ  ಘಟನೆಗಳನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಬೇಕಾಗಿದೆ' ಎಂದು ಅವರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು