ಸೋಮವಾರ, ಮೇ 23, 2022
30 °C

ನಿಮಗಿದು ಗೊತ್ತಾ; ಭಾರತದಲ್ಲಿ ಎಷ್ಟು ಬೆಕ್ಕುಗಳು ಮತ್ತು ಬೀದಿ ನಾಯಿಗಳಿವೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ ಸುಮಾರು 6.2 ಕೋಟಿ ಬೀದಿನಾಯಿಗಳಿದ್ದರೆ, ಬೆಕ್ಕುಗಳ ಸಂಖ್ಯೆ ಸುಮಾರು 91 ಲಕ್ಷ. ಒಟ್ಟಾರೆ ಸುಮಾರು 8 ಕೋಟಿ ನಾಯಿ, ಬೆಕ್ಕುಗಳಿಗೆ ‘ನೆಲೆ’ ಇಲ್ಲ. 88 ಲಕ್ಷ ನಾಯಿ, ಬೆಕ್ಕುಗಳಿಗೆ ಆಶ್ರಯತಾಣಗಳಲ್ಲಿ ಆಸರೆ ದೊರೆತಿದೆ.

ವರದಿಯೊಂದರ ಅನುಸಾರ, ನೆಲೆಯಿಲ್ಲದ ಪ್ರಾಣಿಗಳ ದುಸ್ಥಿತಿ ಕುರಿತ ಸೂಚ್ಯಂಕದಲ್ಲಿ ಭಾರತದ ಶ್ರೇಣಿಯು 10 ಅಂಶಗಳಲ್ಲಿ 2.4 ಆಗಿದೆ. ಬೀದಿ ನಾಯಿಗಳು, ಬೆಕ್ಕುಗಳ ಸಂಖ್ಯೆ ಹೆಚ್ಚಿದಷ್ಟೂ ಈ ಶ್ರೇಣಿ ಕಡಿಮೆ ಆಗುತ್ತದೆ.

ಭಾರತದ ಜನಸಂಖ್ಯೆಯಲ್ಲಿ ಶೇ 68ರಷ್ಟು ಜನರು ಅಂದರೆ ಪ್ರತಿ 10ರಲ್ಲಿ ಒಬ್ಬರು ನನಗೆ ಕನಿಷ್ಠ ವಾರಕ್ಕೊಮ್ಮೆ ಬೆಕ್ಕು ಕಾಣಿಸಿಕೊಳ್ಳುತ್ತದೆ ಎಂದರೆ, ಶೇ 70ರಷ್ಟು ಜನರು ಬಹುತೇಕ ನಿತ್ಯ ಬೀದಿನಾಯಿಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ ಎಂದು ವರದಿ ತಿಳಿಸಿದೆ.

ಸೂಚ್ಯಂಕದ ಅನುಸಾರ, ಭಾರತದಲ್ಲಿ ಶೇ 85ರಷ್ಟು ಸಾಕುಪ್ರಾಣಿಗಳಿಗೆ ನೆಲೆ ಇಲ್ಲವಾಗಿದೆ ಎಂದು ವರದಿ ಹೇಳಿದೆ. 

ಹೆಚ್ಚಿನ ಜನರು ನಾಯಿ ಅಥವಾ ಬೆಕ್ಕು ಸಾಕಲು ಅಥವಾ ಅವುಗಳ ಕ್ಷೇಮ ನೋಡಿಕೊಳ್ಳಲು ಆಸಕ್ತಿಯನ್ನು ತೋರಿರುವುದು ಭವಿಷ್ಯದಲ್ಲಿ ‘ಎಲ್ಲ ಪ್ರಾಣಿಗಳಿಗೂ ಆರೈಕೆ ಸಿಗಲಿದೆ’ ಎಂಬ ಸೂಚನೆಯನ್ನು ನೀಡಿದೆ.

ಸೌಲಭ್ಯ ಇಲ್ಲದಿರುವುದು, ದೂರ ಅಥವಾ ವರ್ಚಸ್ಸಿನ ಕಾರಣಕ್ಕಾಗಿ ನಾವು ಪಶುಸಂಗೋಪನಾ ಕೇಂದ್ರಗಳಿಗೆ ಹೋಗುವುದಿಲ್ಲ ಎಂದು  ದೇಶದ ಜನಸಂಖ್ಯೆಯ ಶೇ 61ರಷ್ಟು ಜನರು ಪ್ರತಿಕ್ರಿಯಿಸುತ್ತಾರೆ. ಇದು, ಜಾಗತಿಕ ಪ್ರಮಾಣ ಶೇ 31ಕ್ಕಿಂತಲೂ ಅಧಿಕವಾಗಿದೆ.

ಈ ಬಗ್ಗೆ ಮಾತನಾಡಿದ ಪೀಪಲ್ಸ್‌ ಫಾರ್ ಅನಿಮಲ್ಸ್ (ಪಿಎಫ್‌ಎ) ಸಂಸ್ಥೆಯ ಗೌರಿ ಮುಲೇಖಿ ಅವರು, ‘ಭಾರತದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚುತ್ತಿದೆ. ನಾಯಿಗಳ ಸಂತತಿ ತಡೆಗೆ ನಿಯಮಗಳ ಜಾರಿ ವಿಳಂಬವಾದುದೂ ಇದಕ್ಕೆ ಕಾರಣ’ ಎಂದು ಹೇಳುತ್ತಾರೆ.

ವರದಿ ಅನುಸಾರ, ಚೀನಾದಲ್ಲಿರುವ ಬೀದಿನಾಯಿ, ಬೆಕ್ಕುಗಳ ಸಂಖ್ಯೆ 7.5 ಕೋಟಿ ಆಗಿದೆ. ಈ ಸಂಖ್ಯೆಯು ಅಮೆರಿಕದಲ್ಲಿ 4.8 ಕೋಟಿ, ಜರ್ಮನಿಯಲ್ಲಿ 20.6 ಲಕ್ಷ, ಗ್ರೀಸ್‌ನಲ್ಲಿ 20 ಲಕ್ಷ, ಮೆಕ್ಸಿಕೊದಲ್ಲಿ 74 ಲಕ್ಷ, ರಷ್ಯಾ, ದಕ್ಷಿಣ ಆಫ್ರಿಕಾದಲ್ಲಿ ತಲಾ 11 ಲಕ್ಷ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು