ಭೋಪಾಲ: ಅನಾರೋಗ್ಯದ ಕಾರಣಗಳನ್ನು ಒಡ್ಡಿ ಸದಾ ಗಾಲಿಕುರ್ಚಿಯಲ್ಲಿ ತೆರಳುತ್ತಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇತ್ತೀಚೆಗಷ್ಟೇ ಬಾಸ್ಕೆಟ್‌ಬಾಲ್ ಆಡಿ ಅಚ್ಚರಿ ಮೂಡಿಸಿದ್ದರು.
ಅದಾದನಂತರ ಈಗ ಭೋಪಾಲದ ಸಂಸದೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಭೋಪಾಲದ ತಮ್ಮ ನಿವಾಸದಲ್ಲಿ ಬಡ ಕುಟುಂಬದ ಯುವತಿಯರವಿವಾಹ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್, ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇದನ್ನು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಹಂಚಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
'ನಮ್ಮ ಭೋಪಾಲದ ಸಂಸದೆ ಬ್ಯಾಸ್ಕೆಟ್‌ಬಾಲ್ ಆಡುವುದನ್ನು, ಯಾರ ಬೆಂಬಲವಿಲ್ಲದೆ ನಡೆದಾಡುವುದು ಮತ್ತು ಈ ರೀತಿ ಖುಷಿಯಿಂದನೃತ್ಯ ಮಾಡುವುದನ್ನು ನೋಡಿದಾಗಲೆಲ್ಲಾ ತುಂಬಾ ಸಂತೋಷವಾಗುತ್ತಿದೆ ?' ಎಂದು ವ್ಯಂಗ್ಯ ಮಾಡಿದ್ದಾರೆ.
ಪ್ರಜ್ಞಾ ಸಿಂಗ್ ಠಾಕೂರ್ ಅವರು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.