ಸೋಮವಾರ, ಆಗಸ್ಟ್ 8, 2022
23 °C

ಟ್ರಕ್‌ಗಳ ತಪಾಸಣೆ ನಡೆಸಿದ್ದಕ್ಕೆ ಅಂಬಾಲಾ ಎಡಿಸಿ ಬೆಂಗಾವಲು ವಾಹನದ ಮೇಲೆ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Truck

ಅಂಬಾಲಾ (ಹರ್ಯಾಣ): ಅಧಿಕ ಪ್ರಮಾಣದಲ್ಲಿ ಸರಕುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್‌ಗಳ ತಪಾಸಣೆ ನಡೆಸಿ ದಂಡ ವಿಧಿಸಿದ  ಅಂಬಾಲಾದ ಹೆಚ್ಚುವರಿ ಉಪ ಆಯುಕ್ತರಾದ ಪ್ರೀತಿ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ರಾತ್ರಿ ಆರ್‌‍ಟಿಎ ಕಾರ್ಯದರ್ಶಿ ಕೂಡಾ ಆಗಿರುವ ಪ್ರೀತಿ ಅವರು ಅಂಬಾಲ -ನರೇನ್‌ಗಢ್ ಹೆದ್ದಾರಿಯಲ್ಲಿ ಟ್ರಕ್‌ಗಳ ತಪಾಸಣೆ ನಡೆಸುತ್ತಿದ್ದರು. ಅಧಿಕ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬಂದ ಟ್ರಕ್ ಮತ್ತು ಇತರ ವಾಹನಗಳಿಗೂ ಅವರು ದಂಡ ವಿಧಿಸಿದ್ದರು.
ಕೆಲವು ಟ್ರಕ್‌ಗಳನ್ನು  ಹರ್ಯಾಣ- ಪಂಜಾಬ್ ಗಡಿ ಪ್ರದೇಶದಲ್ಲಿರುವ  ಹಂಡೆಸರಾ ಗ್ರಾಮದಲ್ಲಿ ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಕೆಲಸ ಮುುಗಿಸಿ ಕಾಲಾ ಅಂಬ್‌ನಿಂದ ಆರ್‌ಟಿಎ ಸಹೋದ್ಯೋಗಿಗಳೊಂದಿಗೆ ಅಂಬಾಲಾ ನಗರಕ್ಕೆ ತೆರಳಿದ್ದರು.

ಅಲ್ಲಿಗೆ ತಲುಪಿದಾಗದ ಸುಮಾರು 60- 70 ಮಂದಿ ದುಷ್ಕರ್ಮಿಗಳು ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಆರ್‌ಟಿಎ ಇಲಾಖೆಯ ಎರಡು ವಾಹನಗಳನ್ನು  ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ತಕ್ಷಣವೇ ಪ್ರೀತಿ ಅವರು ಅಲ್ಲಿಂದ ತಪ್ಪಿಸಿಕೊಂಡು ಪಂಜೋಕ್ರಾ ಪೊಲೀಸ್ ಠಾಣೆಗೆ  ತಲುಪಿದರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಮಾಹಿತಿ ಸಿಕ್ಕಿದ ಕೂಡಲೇ ಮೂವರು ಡಿಎಸ್‌ಪಿ ಮತ್ತು ಉಪ ವಿಭಾಗೀಯ ಮೆಜಿಸ್ಟ್ರೇಟರ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ, ಸುಮಾರು 60-70 ಮಂದಿಯ ತಂಡ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ, ಸರಕು ವಾಹನಗಳ ಮೇಲೆ ಕ್ರಮ ಜರುಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಡಿಎಸ್‌ಪಿ ಸುಲ್ತಾನ್ ಸಿಂಗ್ ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು