ಮಂಗಳವಾರ, ನವೆಂಬರ್ 24, 2020
20 °C

ಕೆಲವು ದೇಶಗಳು ಇನ್ನೂ ಭಾರತೀಯರಿಗೆ ಪ್ರವೇಶ ನಿರ್ಬಂಧಿಸಿವೆ: ವಿಮಾನಯಾನ ಸಚಿವ

ಪಿಟಿಐ Updated:

ಅಕ್ಷರ ಗಾತ್ರ : | |

Aviation Minister Hardeep Singh Puri

ನವದೆಹಲಿ: ಕೆಲವು ದೇಶಗಳು ಇನ್ನೂ ಭಾರತೀಯರ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿಲ್ಲ ಮತ್ತು ಅವರು ತಮ್ಮ ಮಿತಿಗಳನ್ನು ಸರಳಗೊಳಿಸಿದಾಗ ಈ ದೇಶಗಳಿಗೆ ಪ್ರಯಾಣಿಸಲು ನೆರವಾಗಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸದ್ಯ ಭಾರತದಿಂದ ಪ್ರಯಾಣಿಕರನ್ನು ಹೊತ್ತೊಯ್ಯಲು ವಿಮಾನಯಾನ ಸಂಸ್ಥೆಗಳಿಗೆ ಸೌದಿ ಅರೇಬಿಯಾ ಇಂದಿಗೂ ಅವಕಾಶ ನೀಡಿಲ್ಲ.

'ನಾವು ಮೇ 6, 2020 ರಿಂದ ವಿಬಿಎಂ (ವಂದೇ ಭಾರತ್ ಮಿಷನ್) ಅಡಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳನ್ನು ನಡೆಸುತ್ತಿದ್ದೇವೆ. ಆದಾಗ್ಯೂ, ಕೊಲ್ಲಿ ಪ್ರದೇಶದ ಕೆಲವು ದೇಶಗಳು ಸೇರಿದಂತೆ ಕೆಲವು ದೇಶಗಳು ಇನ್ನೂ ಭಾರತೀಯ ಪ್ರಜೆಗಳ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

'ಅಂತಹ ದೇಶಗಳು ನಿರ್ಬಂಧಗಳನ್ನು ಸಡಿಲಗೊಳಿಸಿದಾಗ ಈ ದೇಶಗಳಿಗೆ ಪ್ರಯಾಣಿಕರು ಪ್ರಯಾಣಿಸಲು ನೆರವು ಮಾಡಿಕೊಡಲು ನಾವು ಸಿದ್ಧರಿದ್ದೇವೆ' ಎಂದು ಅವರು ಹೇಳಿದರು.

ಅಕ್ಟೋಬರ್ 22 ರಂದು ಕೇರಳ ಮತ್ತು ಬಹ್ರೇನ್ ನಡುವೆ ಕಾರ್ಯನಿರ್ವಹಿಸುವ ವಿಶೇಷ ವಿಮಾನಗಳ ಸರಾಸರಿ ದರಗಳು ₹ 30,000 ಮತ್ತು, 39,000 ರಷ್ಟಿದೆ. ಏಕೆಂದರೆ ಗಲ್ಫ್ ದೇಶವು ವಾರಕ್ಕೆ ಭಾರತದಿಂದ 750 ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಿದೆ ಎಂದು ಸಚಿವರು ಹೇಳಿದ್ದರು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23ರಿಂದ ಭಾರತದಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ, ವಿಶೇಷ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಭಾರತದಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಭಾರತ ಮತ್ತು ಇತರ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂಧ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ತಿಂಗಳ ನಂತರ ಭಾರತವು ಮೇ 25 ರಂದು ದೇಶೀಯ ಪ್ರಯಾಣಿಕರ ಹಾರಾಟವನ್ನು ಪ್ರಾರಂಭಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು