ಸೋಮವಾರ, ಜುಲೈ 4, 2022
25 °C

ಪಂಚರಾಜ್ಯ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಮತಗಳೆಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶ ಮಾರ್ಚ್‌ 10ರಂದು ಪ್ರಕಟವಾಗಿದೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪಂಜಾಬ್‌ನಲ್ಲಿ ಈ ಬಾರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಭಾರಿ ಬಹುಮತ ಪಡೆದುಕೊಂಡಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ಒಲಿದಿದೆ.

ಈ ಐದೂ ರಾಜ್ಯಗಳಲ್ಲಿ ನೋಟಾ ಒತ್ತಿದವರ ಸಂಖ್ಯೆ ಬರೋಬ್ಬರಿ 7,99,302.

‌403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಹೆಚ್ಚು ಜನರು ನೋಟಾ ಪ್ರಯೋಗಿಸಿದ್ದಾರೆ. ಇಲ್ಲಿನ 6,21,186 ಜನರು ಅಂದರೆ ಶೇ 0.7 ರಷ್ಟು ಮತದಾರರು ಮತಯಂತ್ರದಲ್ಲಿ ನೋಟಾ ಒತ್ತಿದ್ದಾರೆ.

ಉತ್ತರಾಖಂಡ (46,830) ಹಾಗೂ ಪಂಜಾಬ್‌ನಲ್ಲಿ (1,10,308) ಮತ ಚಲಾಯಿಸಿದವರ ಪೈಕಿ ಶೇ 0.9 ರಷ್ಟು ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಉಳಿದಂತೆ, ಮಣಿಪುರದಲ್ಲಿ ಶೇ 0.6 ರಷ್ಟು ಅಂದರೆ, 10,349 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಗೋವಾದಲ್ಲಿ ಈ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ. ಇಲ್ಲಿನ ಶೇ 1.1 ರಷ್ಟು ಜನರು (10,629) ಈ ಆಯ್ಕೆ ಬಳಸಿಕೊಂಡಿದ್ದಾರೆ.

ಯಾವುದೇ ಅಭ್ಯರ್ಥಿಗೆ ಮತಹಾಕಲು ಇಚ್ಚಿಸದ ಮತದಾರರಿಗಾಗಿ 2013ರಲ್ಲಿ ಮೊದಲ ಬಾರಿಗೆ ನೋಟಾ ಆಯ್ಕೆ ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ಅದೇಶದ ಬಳಿಕ ವಿದ್ಯುನ್ಮಾನ ಮತಯಂತ್ರದಲ್ಲಿ ಕೊನೆಯ ಆಯ್ಕೆಯಾಗಿ ನೋಟಾ ಚಿಹ್ನೆ ಸೇರಿಸಲಾಗಿತ್ತು.

ಆದಾಗ್ಯೂ, ಅಭ್ಯರ್ಥಿಗಳು ಪಡೆಯುವ ಮತಕ್ಕಿಂತ ನೋಟಾ ಮತಗಳ ಸಂಖ್ಯೆ ಹೆಚ್ಚಾದರೆ, ಮತ್ತೊಮ್ಮೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸುಪ್ರೀಂ ನಿರಾಕರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು