ವಾರಾಣಸಿ: ಪ್ರೇಮಿಗಳ ದಿನಾಚರಣೆಯ ಬಳಿಕ ಹೊಸ ವರ್ಷದ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಕಾಶಿಯಲ್ಲಿ ಹೋಟೆಲ್, ಮಾಲ್‌ಗಳಲ್ಲಿ ಪೋಸ್ಟರ್ ಅಂಟಿಸಿರುವ ಬಜರಂಗದಳದ ಕಾರ್ಯಕರ್ತರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ವಿರುದ್ಧ ಜನರನ್ನು ಎಚ್ಚರಿಸಿದೆ.

ಇದನ್ನೂ ಓದಿ:ರಾಹುಲ್ ಗಾಂಧಿ ಇಟಲಿಗೆ: ಗಾಳಿ ಸುದ್ದಿ ಬೇಡ ಎಂದ ಸುರ್ಜೇವಾಲ

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಚಾರವನ್ನು ಅನೈತಿಕ ಮತ್ತು ಅಧರ್ಮ ಎಂದು ಬಣ್ಣಿಸಿರುವ ಬಜರಂಗದಳವು ಹೊಸ ವರ್ಷಾಚರಣೆಯನ್ನು ಬಲವಾಗಿ ವಿರೋಧಿಸಿದೆ.

ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠಿ ರುದ್ರ ಪ್ರತಿಕ್ರಿಯಿಸಿದ್ದು, 'ಹೊಸ ವರ್ಷಾಚರಣೆ ಅರ್ಥಹೀನ ಕಾರ್ಯಕ್ರಮವಾಗಿದೆ. ಇದರಲ್ಲಿ ಯಾವುದೇ ನೈತಿಕತೆ ಇಲ್ಲ ಮತ್ತು ಆಧ್ಮಾತ್ಮಿಕತೆಗೆ ಯಾವುದೇ ಸಂಬಂಧವಿಲ್ಲ. ಇಂತಹ ಆಚರಣೆಗಳು ದೇಶದ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತವೆ' ಎಂದು ಹೇಳಿದ್ದಾರೆ.

'ಹೊಸ ವರ್ಷಾಚರಣೆಯ ನೆಪದಲ್ಲಿ ಮದ್ಯ ಹಾಗೂ ಡ್ರಗ್ ಮಾಫಿಯಾ ಪರಿಸ್ಥಿತಿಯನ್ನು ದುರುಪಯೋಗಪಡಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದರು.

ನಗರದ ಹಲವೆಡೆ ಸಂಭ್ರಮಾಚರಣೆ ನಡೆಯಲಿರುವುದರಿಂದ ಪೊಲೀಸ್ ಅನುಮತಿಯೊಂದಿಗೆ ಶಾಂತಿಯುವಾಗಿ ಕಾನೂನಿನ ಮಿತಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ಅದೇ ಹೊತ್ತಿಗೆ ಹೋಟೆಲ್, ಕ್ಲಬ್, ಪಬ್, ಬಾರ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ.

ಹಾಗಿದ್ದರೂ ಕಾನೂನು ಸುವ್ಯವಸ್ಥೆಯನ್ನು ಹಾನಿ ಮಾಡಲು ಯಾರಿಗೂ ಅನುವು ಮಾಡಿಕೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

'ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಏನೇ ಅಹಿತಕರ ಘಟನೆ ನಡೆದರೂ ಪೊಲೀಸ್ ಕಠಿಣ ಕ್ರಮ ಕೈಗೊಳ್ಳಲಿದೆ. ಶಾಂತಿಯುತವಾಗಿ ಹೊಸ ವರ್ಷಾಚರಣೆ ಆಚರಿಸಲು ಸೂಕ್ತ ವ್ಯವಸ್ಥೆ ಮಾಡಿದ್ದೇವೆ' ಎಂದು ಪೊಲೀಸ್ ಆಯುಕ್ತ ಸತೀಶ್ ಗಣೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.