ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಪೂರೈಕೆಯಲ್ಲಿ ಸ್ವಾವಲಂಬಿಯಾಗಿ: ಆಸ್ಪತ್ರೆಗಳಿಗೆ ನಿತಿನ್ ಗಡ್ಕರಿ ಕರೆ

Last Updated 4 ಜೂನ್ 2021, 12:04 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳು ಆಮ್ಲಜನಕ ಪೂರೈಕೆ ಮತ್ತು ಇತರ ವೈದ್ಯಕೀಯ ಸೌಲಭ್ಯಗಳಲ್ಲಿ ಸ್ವಾವಲಂಬಿಯಾಗಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

'ಮಹಾರಾಷ್ಟ್ರ ಬಿಜೆಪಿ ವೈದ್ಯಕೀಯ ಘಟಕ' ಆಯೋಜಿಸಿದ್ದ ಕೋವಿಡ್-19 ಕುರಿತಾದ ವೆಬಿನಾರ್‌ನಲ್ಲಿ ವೈದ್ಯರನ್ನು ಉದ್ದೇಶಿಸಿ ಮಾತನಾಡಿ, 'ಆಮ್ಲಜನಕದ ಪೂರೈಕೆಯು ಒಂದು ನಿರ್ಣಾಯಕ ವಿಷಯವಾಗಿದೆ ಮತ್ತು ಈ ವಿಚಾರದಲ್ಲಿ ನಾವು ಸ್ವಾವಲಂಬಿಯಾಗಬೇಕು. 50ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳು ಆಮ್ಲಜನಕ ಪೂರೈಕೆಯಲ್ಲಿ ಸ್ವಾವಲಂಬಿಯಾಗಬೇಕು. ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಟ್ಯಾಂಕರ್ ಲಭ್ಯವಾಗುವಂತೆ ಮಾಡಬೇಕು' ಎಂದು ಅವರು ಹೇಳಿದರು.

ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ಪ್ರತಿ ಜಿಲ್ಲೆಯು ತಕ್ಷಣದ, ಮಧ್ಯಂತರ ಮತ್ತು ದೀರ್ಘಕಾಲೀನ ಕ್ರಿಯಾ ಯೋಜನೆಯನ್ನು ಹೊಂದಬೇಕು. ಪ್ರತಿ ಜಿಲ್ಲೆಯಲ್ಲಿಯೂ 4,000 ರಿಂದ 5,000 ಹೆಚ್ಚುವರಿ ಆಮ್ಲಜನಕ ಸಿಲಿಂಡರ್‌ಗಳನ್ನು ಹೊಂದಿರಬೇಕು. ಆಸ್ಪತ್ರೆಗಳು ಸದ್ಯ ಹೊಂದಿರುವ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

'ಪ್ರತಿ ಆಸ್ಪತ್ರೆಯು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎರಡರಿಂದ ನಾಲ್ಕು ದಿನಗಳಲ್ಲಿ ದಿನಗಳಲ್ಲಿ ಹಾಸಿಗೆಯ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಯೋಜಿಸಬೇಕು. ಅದೇ ರೀತಿ, 50 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳು ಕನಿಷ್ಠ ಐದರಿಂದ ಏಳು ವೆಂಟಿಲೇಟರ್ ಹಾಸಿಗೆಗಳನ್ನು ಹೊಂದಿರಬೇಕು' ಎಂದು ಅವರು ಹೇಳಿದರು.

ಸಮಾಜದೆಡೆಗೆ ಕೆಲಸ ಮಾಡಿ, ಅದುವೆ ನಿಜವಾದ ಸಾಮಾಜಿಕ ಕಾರ್ಯ ಮತ್ತು ರಾಷ್ಟ್ರೀಯತೆ ಎಂದು 'ಮಹಾರಾಷ್ಟ್ರ ಬಿಜೆಪಿ ವೈದ್ಯಕೀಯ ಘಟಕ'ದ ಸದ್ಯರಿಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT