ಆನ್‌ಲೈನ್ ಗೇಮಿಂಗ್ ಕಂಪನಿ ಬೆಟ್ಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ: ಸಚಿವ ರಾಜೀವ್

ನವದೆಹಲಿ: ‘ಆಟಗಳ ಫಲಿತಾಂಶದ ಮೇಲೆ ಆನ್‌ಲೈನ್ ಗೇಮಿಂಗ್ ಕಂಪನಿಗಳು ಬೆಟ್ಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂಬ ಕರಡು ನಿಯಮ ರೂಪಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದರು.
‘ಆನ್‌ಲೈನ್ ಗೇಮಿಂಗ್ ನಿಯಮಗಳ ಕುರಿತು ಇರುವ ಸ್ವಯಂ ನಿಯಂತ್ರಕ ಸಂಸ್ಥೆಗೆ ಎಲ್ಲಾ ಆನ್‌ಲೈನ್ ಗೇಮಿಂಗ್ ಕಂಪೆನಿಗಳು ನೋಂದಾಯಿಸಿಕೊಳ್ಳಬೇಕು’ ಎಂದರು.
‘ಕರಡು ನಿಯಮಗಳ ಕುರಿತು ಕಂಪನಿಗಳು ಪ್ರತಿಕ್ರಿಯಿಸಲು ಜನವರಿ 17ರವರೆಗೆ ಗಡುವು ನೀಡಲಾಗಿದೆ. ಫೆಬ್ರುವರಿ ಹೊತ್ತಿಗೆ ಈ ಎಲ್ಲಾ ನಿಯಮಗಳು ಸಿದ್ಧವಾಗಲಿವೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.