ಶನಿವಾರ, ಮಾರ್ಚ್ 25, 2023
23 °C
ಈಶ್ವರ್‌ ಅಲ್ಲಾ ತೇರೋ ನಾಮ್‌ ಎಂದ ಕಾಂಗ್ರೆಸ್‌

Bharat Jodo Yatra | ರಾಹುಲ್‌ ಗಾಂಧಿಗೆ ಶಿವನ ವಿಗ್ರಹ ನೀಡಿದ ಮುಸ್ಲಿಂ ಮಹಿಳೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಸೋಹ್ನಾ (ಹರಿಯಾಣ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಹರಿಯಾಣದಲ್ಲಿ ಸಾಗುತ್ತಿದೆ. ಶುಕ್ರವಾರ ಮುಂಜಾನೆ ಸೋಹ್ನಾದ ಖೇರ್ಲಿ ಲಾಲಾದಿಂದ ಯಾತ್ರೆ ಪ್ರಾರಂಭವಾಯಿತು.

ಹಲವು ಕಾಂಗ್ರೆಸ್‌ ನಾಯಕರು, ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಬಾವುಟ ಹಿಡಿದುಕೊಂಡು ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದರು. ಈ ನಡುವೆ ಮುಸ್ಲಿಂ ಮಹಿಳೆಯೊಬ್ಬರು ರಾಹುಲ್‌ ಗಾಂಧಿ ಅವರಿಗೆ ಶಿವನ ವಿಗ್ರಹ ನೀಡಿದ್ದು ವಿಶೇಷವಾಗಿತ್ತು.

ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬರು, ಶಿವನ ವಿಗ್ರಹವನ್ನು ರಾಹುಲ್‌ ಗಾಂಧಿಗೆ ನೀಡಿದರು. ಈ ಫೋಟೋವನ್ನು ಕಾಂಗ್ರೆಸ್‌ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಈಶ್ವರ್‌ ಅಲ್ಲಾ ತೇರೋ ನಾಮ್‌‘ ಎಂದು ಬರೆದುಕೊಂಡಿದೆ.

ಬುಧವಾರ ಯಾತ್ರೆಯು ಹರಿಯಾಣ ಪ್ರವೇಶ ಮಾಡಿದ್ದು, ಶನಿವಾರ ದೆಹಲಿಗೆ ಪ್ರವೇಶ ಮಾಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು