ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಎಡಪಕ್ಷಗಳಿಗೆ ಮತ್ತಷ್ಟು ಬಲ, 20 ಕ್ಷೇತ್ರಗಳಲ್ಲಿ ಮುನ್ನಡೆ

Last Updated 10 ನವೆಂಬರ್ 2020, 8:19 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಎಡಪಕ್ಷ 20 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ 29 ಚುನಾವಣಾ ಕ್ಷೇತ್ರಗಳಲ್ಲಿಎಡಪಕ್ಷ ಸ್ಪರ್ಧಿಸಿದೆ. ಈ ಪೈಕಿ ಸಿಪಿಐ (ಎಂ-ಎಲ್) 19 ಸೀಟುಗಳಲ್ಲಿ ಅಭ್ಯರ್ಥಿಗಳನ್ನುಕಣಕ್ಕಿಳಿಸಿದ್ದು, ಸಿಪಿಐ - 6 ಮತ್ತು ಸಿಪಿಎಂ- 4 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಸಿಪಿಐ, ಸಿಪಿಐ(ಎಂ),ಸಿಪಿಐ (ಎಂ-ಎಲ್) ಪಕ್ಷವು ಅಜಿಯಾಂವ್ ,ಅರಾಹ್, ಅರ್ವಾಲ್, ಬಲರಾಂಪುರ್, ಬಭೂತಿಪುರ್, ದರೌಲಿ, ದರೌಂದಾ, ದಮರಾನ್, ಘೋಸಿ ,ಕರಾಕಟ್, ಮಾಂಝಿ, ಮತಿಹನಿ, ಪಲಿಗಂಜ್, ತರಾರಿ, ವಾರಿಸ್‌ನಗರ್, ಜಿರಾದೈ, ಬಚ್ವಾರಾ ಮತ್ತು ಬಾಖ್ರಿ ಸೀಟುಗಳಲ್ಲಿ ಸ್ಪರ್ಧಿಸಿದೆ.

ಬಿಹಾರದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿದ್ದ ಎಡರಂಗ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಪರಾಭವಗೊಂಡಿತ್ತು,. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿದ್ದು 2015ರ ಚುನಾವಣೆಯಲ್ಲಿ ಸಿಪಿಐ(ಎಂ- ಎಲ್ ) 3 ಸೀಟುಗಳನ್ನು ಗಳಿಸಿತ್ತು. ಇನ್ನೆರಡು ಪಕ್ಷಗಳು ಖಾತೆ ತೆರೆದಿರಲಿಲ್ಲ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ, ಎಡ ಪಕ್ಷಗಳು ಮಹಾಘಟ್‌ಬಂಧನ್‌ನಲ್ಲಿ ಮಹತ್ತರ ಪಾತ್ರ ವಹಿಸಲಿವೆ.

ಚುನಾವಣಾ ಸಮೀಕ್ಷೆಗಳು ಕೂಡಾ ಈ ಬಾರಿ ಸಿಪಿಐ(ಎಂಎಲ್)ಗೆ ಹೆಚ್ಚಿನ ಸೀಟು ಲಭಿಸುವ ಬಗ್ಗೆ ಭವಿಷ್ಯ ನುಡಿದಿದ್ದವು, ಇಂಡಿಯಾ ಟುಡೇ - ಆಕ್ಸಿಸ್ ಚುನಾವಣಾ ಸಮೀಕ್ಷೆಯು ಸಿಪಿಐ (ಎಂಎಲ್) 12- 16 ಸೀಟುಗಳನ್ನು ಗೆಲ್ಲುವುದಾಗಿ ಭವಿಷ್ಯ ನುಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT