ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯೇ ಬಂಗಾಳ ಸಂಸ್ಕೃತಿ ರಕ್ಷಕ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ

Last Updated 14 ಏಪ್ರಿಲ್ 2021, 19:40 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿಯ ಹಿರಿಯ ಮುಖಂಡರ ವಿರುದ್ಧ ಮಮತಾ ಅವರು ಆಕ್ಷೇಪಾರ್ಹ ಮಾತುಗಳನ್ನಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ಅವರು (ಮಮತಾ) ಬಂಗಾಳದ ಸಂಸ್ಕೃತಿಯನ್ನು ಅಪಮಾನಿಸುತ್ತಿದ್ದಾರೆ’ ಎಂದಿದ್ದಾರೆ.

‘ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಂಕಿಮಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ ಟ್ಯಾಗೋರ್‌, ಶ್ಯಾಮಪ್ರಸಾದ ಮುಖರ್ಜಿ ಮುಂತಾದ ತತ್ವಜ್ಞಾನಿಗಳು ಹಾಗೂ ಚಿಂತಕರ ಸಂದೇಶಗಳನ್ನು ಪ್ರಚಾರ ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ. ಬಿಜೆಪಿಯೇ ಬಂಗಾಳದ ಸಂಸ್ಕೃತಿಯ ನಿಜವಾದ ರಕ್ಷಕ. ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಮಮತಾ ಅವರು ಬಳಸಿದ ಪದಗಳು, ನನ್ನ ವಿರುದ್ಧ ಅವರು ಮಾಡಿರುವ ಭಾಷಾಪ್ರಯೋಗವು ಬಂಗಾಳ ಸಂಸ್ಕೃತಿಯನ್ನು ಬಿಂಬಿಸುತ್ತದೆಯೇ’ ಎಂದು ಅವರು ಜಮಾಲ್ಪುರದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಪ್ರಶ್ನಿಸಿದರು.

‘ಒಗ್ಗಟ್ಟಿನಿಂದ ಮತಚಲಾಯಿಸುವಂತೆ ಒಂದು ಸಮುದಾಯದ ಜನರಿಗೆ ಕರೆನೀಡಿದ್ದಕ್ಕಾಗಿ ಮಮತಾ ಅವರಿಗೆ ಚುನಾವಣಾ ಆಯೋಗವು 24 ಗಂಟೆಗಳ ಪ್ರಚಾರ ನಿಷೇಧ ವಿಧಿಸಿತ್ತು. ಅವರಿಗೆ ಶಾಶ್ವತವಾಗಿ ನಿಷೇಧ ಹೇರಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ’ ಎಂದು ನಡ್ಡಾ ಜನರನ್ನು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT