ಭಾನುವಾರ, ನವೆಂಬರ್ 28, 2021
21 °C

ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಎರಡನೇ ಕೊಲೆ ಬೆದರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ‘ಐಸಿಸ್‌ ಕಾಶ್ಮೀರ’ದಿಂದ ಮತ್ತೊಂದು ಕೊಲೆ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಬುಧವಾರ ಸಂಜೆ ಟ್ವೀಟ್‌ ಮಾಡಿರುವ ಸುದ್ದಿಸಂಸ್ಥೆ ಎಎನ್‌ಐ, ‘ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ‘ಐಸಿಸ್‌ ಕಾಶ್ಮೀರ’ದಿಂದ ಎರಡನೇ ಕೊಲೆ ಬೆದರಿಕೆ ಬಂದಿದೆ. ಗಂಭೀರ್‌ ನಿವಾಸದ ಹೊರಗಿನ ದೃಶ್ಯಗಳನ್ನು ಹೊಂದಿರುವ ವಿಡಿಯೊವನ್ನು ಬೆದರಿಕೆಯ ಇ-ಮೇಲ್‌ನೊಂದಿಗೆ ಲಗತ್ತಿಸಲಾಗಿದೆ ಎಂಬುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ‘ ಎಂದು ಹೇಳಿದೆ.

‘ಐಸಿಸ್‌ ಕಾಶ್ಮೀರದಿಂದ ಗೌತಮ್ ಗಂಭೀರ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಅವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ’ಎಂದು ಪೊಲೀಸ್ ಅಧಿಕಾರ ಶ್ವೇತಾ ಚೌಹಾಣ್ ಬುಧವಾರ ಬೆಳಿಗ್ಗೆ ತಿಳಿಸಿದ್ದರು.   

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನನ್ನ ‘ದೊಡ್ಡಣ್ಣ’ ಇದ್ದಂತೆ ಎಂದಿರುವ ಪಂಜಾಬ್‌ನ ಕಾಂಗ್ರೆಸ್ ಮುಖಂಡ ನವಜೋತ್ ಸಿಧು ಹೇಳಿಕೆ ನಾಚಿಕೆಗೇಡಿನ ವಿಚಾರ ಎಂದು ಗೌತಮ್ ಗಂಭೀರ್ ವಾಗ್ದಾಳಿ ನಡೆಸಿದ್ದರು. ಈ ರೀತಿ ಕೆಟ್ಟ ಹೇಳಿಕೆ ಕೊಡುವ ಮುನ್ನ ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು