ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

Last Updated 7 ಮಾರ್ಚ್ 2022, 6:57 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ತಿಳಿಸಿದೆ.

ಬಿಎಸ್‌ಎಫ್ ಅಧಿಕಾರಿಗಳ ಪ್ರಕಾರ, ಫಿರೋಜ್‌ಪುರ ಸೆಕ್ಟರ್‌ನಲ್ಲಿ ಯೋಧರಿಗೆ ಅನುಮಾನಾಸ್ಪದವಾಗಿ ಏನೋ ಹಾರಾಟ ನಡೆಸುತ್ತಿದ್ದ ಶಬ್ಧ ಕೇಳಿಸಿದೆ. ಬಳಿಕ ಪಾಕಿಸ್ತಾನ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್ ಅನ್ನು ಕಂಡಿದ್ದಾರೆ. ಕೂಡಲೇ ಎಚ್ಚೆತ್ತ ಪಡೆ ಡ್ರೋನ್ ಅನ್ನು ಹೊಡೆದುರುಳಿಸಿದೆ.

ಡ್ರೋನ್‌ಗೆ ಸಣ್ಣ ಚೀಲವನ್ನು (ಹಸಿರು ಬಣ್ಣ) ಅಲವಡಿಸಲಾಗಿತ್ತು. ಅದರಲ್ಲಿ 4 ಹಳದಿ ಮತ್ತು ಒಂದು ಕಪ್ಪು ಬಣ್ಣದ ಚಿಕ್ಕ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಿಷಿದ್ಧ ಸರಕು ಎಂದು ಶಂಕಿಸಲಾಗಿದೆ ಎಂದು ಬಿಎಸ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.

ಪಂಜಾಬ್ ಮತ್ತು ಜಮ್ಮು ಸೆಕ್ಟರ್‌ಗಳಿಗೆ ನೆರೆ ದೇಶವು ಈ ರೀತಿಯ ನಿಷಿದ್ಧ ಸರಕನ್ನು ಕಳುಹಿಸುತ್ತಿರುವುದು ಇದೇ ಮೊದಲೇನಲ್ಲ.

ಭಾರತದ ಗಡಿ ಕಾವಲು ಪಡೆ ರಕ್ಷಣಾ ಸಚಿವಾಲಯದ ಸಂಶೋಧನಾ ವಿಭಾಗ ಡಿಆರ್‌ಡಿಒ ಸಹಯೋಗದೊಂದಿಗೆ ಆ್ಯಂಟಿ ಡ್ರೋನ್ ತಂತ್ರಜ್ಞಾನ ಹೊಂದಲು ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಪಾಕಿಸ್ತಾನದ ಕಡೆಯಿಂದ ಕ್ವಾಡ್‌ಕಾಪ್ಟರ್ ಭಾರತದ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT